ಹನುಮಸಾಗರದ ಕುರಬಗೇರಾ ಸ.ಮಾ.ಹಿ.ಪ್ರಾ. ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಮುಖ್ಯಶಿಕ್ಷಕ ಚಂದಪ್ಪ ಹಕ್ಕಿ ಉದ್ಘಾಟಿಸಿದರು. ಧ.ಗ್ರಾ.ಯೋ. ತಾಲೂಕು ಕೃಷಿ ಯೋಜನಾಧಿಕಾರಿ ರವಿಚಂದ್ರ, ಒಕ್ಕೂಟದ ಅಧಕ್ಷೆ ಲಕ್ಷ್ಮೀ ಪತ್ತಾರ, ಎಸ್ಡಿಎಂಸಿ ಮಾಜಿ ಸದಸ್ಯ ಕಳಕಪ್ಪ ಹೂಗಾರ ಇತರರಿದ್ದರು. 
ಜಿಲ್ಲೆ

ಪ್ಲಾಸ್ಟಿಕ್ ಬಳಕೆ ಮಾಡದಿರಿ

ಹನುಮಸಾಗರ; ಗಿಡ ಮರಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿರುವುದರಿಂದ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯುತ್ತಿಲ್ಲ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ತಾಲೂಕು ಕೃಷಿ ಯೋಜನಾಧಿಕಾರಿ ರವಿಚಂದ್ರ ಹೇಳಿದರು.

ಪಟ್ಟಣದ ಕುರಬಗೇರಾ ಸ.ಮಾ.ಹಿ.ಪ್ರಾ. ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶನಿವಾರ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳೆಲ್ಲ ಒಂದೊಂದು ಗಿಡ ನೆಡಬೇಕು. ಅವುಗಳಿಂದ ನಮಗೆ ಶುದ್ಧ ಗಾಳಿ ಸಿಗುತ್ತದೆ.

ಇದರಿಂದ ಸಕಾಲಕ್ಕೆ ಸರಿಯಾಗಿ ಮಳೆಯಾಗಿತ್ತದೆ. ಶುದ್ಧ ವಾತಾವರಣ ನಿರ್ಮಾಣವಾಗುತ್ತದೆ. ಪ್ಲಾಸ್ಟಿಕ್ ಬಳಕೆ ಮಾಡಬಾರದು. ಧರ್ಮಸ್ಥಳ ಸಂಘದಿಂದ 65 ಯೋಜನೆಗಳು ಕರ್ನಾಟಕದಲ್ಲೆಡೆ ನಡೆಯುತ್ತಿದ್ದು, ಅದರಲ್ಲಿ ಪರಿಸರ ಜಾಗೃತಿ ಚಟುವಟಿಕೆಯೂ ಒಂದು ಎಂದರು.

ಮುಖ್ಯ ಶಿಕ್ಷಕ ಚಂದಪ್ಪ ಹಕ್ಕಿ ಮಾತನಾಡಿ, ಅನ್ನ, ನೀರು, ಗಾಳಿ ಚೆನ್ನಾಗಿದ್ದರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ನಾಡಿಗಾಗಿ ದುಡಿಯುವವರು ಸಿಗುವುದು ಅತೀ ವಿರಳ. ಇಂಥ ಕೆಲಸ ಧರ್ಮಸ್ಥಳ ಸಂಘದವರು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಒಕ್ಕೂಟದ ಅಧಕ್ಷೆ ಲಕ್ಷ್ಮೀ ಪತ್ತಾರ, ಎಸ್ಡಿಎಂಸಿ ಮಾಜಿ ಸದಸ್ಯ ಕಳಕಪ್ಪ ಹೂಗಾರ, ವಲಯ ಮೇಲ್ವಿಚಾರಕಿ ನಂದಾ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಅಬೂಬಕರ್, ಬಸಮ್ಮ ಹಿರೇಮಠ, ಮಂಜುಳಾ, ಸುನಿತಾ ಕೋಮಾರಿ, ಶಿಕ್ಷಕರು ಇತರರಿದ್ದರು.