ಕುಂಬಳಾವತಿ ಗ್ರಾಮದಲ್ಲಿ ದ್ಯಾಮಾಂಭಿಕ ದೇವಿ ಜಾತ್ರೆ ನಿಮಿತ್ತ ದೇವಿಗೆ ಬಳಿ ಕೊಡಲು ಮೀಸಲಿಟ್ಟ ಕೋಣವನ್ನು ಗ್ರಾಮಸ್ಥರು ಬಸವ ಧರ್ಮ ಜ್ಞಾನಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ಮೂಲಕ ಸರ್ಕಾರಕ್ಕೆ ಒಪ್ಪಿಸಿದರು. ಪಿಎಸ್‌ಐ ಧನುಂಜಯ ಹಿರೇಮಠ, ಗ್ರಾಮಸ್ಥರಾದ ಸುಬ್ಬರಾವ್ ಕುಲಕರ್ಣಿ, ಹುಲ್ಲಪ್ಪ ವಡಿಗೇರಿ, ಪ್ರಕಾಶಸಿಂಗ್ ರಜಪೂತ, ಕಳಕಯ್ಯ ಹಿರೇಮಠ, ಪಕ್ಷಪ್ಪ ಹೊಸಮನಿ, ಶರಣಪ್ಪ ಹನಮಸಾಗರ, ಶರಣಪ್ಪ ವಡಿಗೇರಿ, ಹನಮಪ್ಪ ಕಂಡೇಕಾರ, ದ್ಯಾಮಣ್ಣ ಗೋನಾಳ, ಶೇಖಪ್ಪ ಕುಂಟೋಜಿ, ಶಿವಮಲ್ಲಪ್ಪ ಕುಂಟೋಜಿ, ಶರಣಪ್ಪ ಗುಡಿ, ಯಲಗೂರದಪ್ಪ ವಡಿಗೇರಿ, ನಾಗಪ್ಪ ಹೊಸಮನಿ ಇತರರಿದ್ದರು  
ಜಿಲ್ಲೆ

ದೇವರು ಪ್ರಾಣಿ ಬಲಿ ಕೇಳುವುದಿಲ್ಲ, ಬಸವ ಧರ್ಮ ಜ್ಞಾನಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ಹೇಳಿಕೆ

ಹನುಮಸಾಗರ: ಸಮೀಪದ ಕುಂಬಳಾವತಿ ಗ್ರಾಮದ ದ್ಯಾಮಾಂಭಿಕ ದೇವಿ ಜಾತ್ರೆ ನಿಮಿತ್ತ ದೇವಿಗೆ ಬಲಿ ಕೊಡಲು ಮೀಸಲಿಟ್ಟಿದ್ದ ಕೋಣವನ್ನು ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಬುಧವಾರ ಸಂಜೆ ಸರ್ಕಾರಕ್ಕೆ ಹಸ್ತಾಂತರಿಸಿದರು.

ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಬಸವ ಧರ್ಮ ಜ್ಞಾನಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ಮಾತನಾಡಿ, ದೇವಿಗೆ ಬಲಿ ಕೊಡುವ ಕೋಣವನ್ನು ಹಸ್ತಾಂತರ ಮಾಡಿದ್ದು ಒಳ್ಳೆಯದು. ಯಾವ ದೇವರು ಪ್ರಾಣಿಗಳನ್ನು ಬಲಿ ಬೇಡುವುದಿಲ್ಲ. ಸಾರ್ವಜನಿಕರು ಜಾಗೃತರಾಗಿರಬೇಕು. ಮೌಢ್ಯತೆ ಆಚರಣೆ ಬಿಡಬೇಕು. ದೇವಿಗೆ ಹೂವು, ಹಣ್ಣು, ಕಾಯಿ, ಹೊಳಿಗೆ, ಕಡಬು ನೈವೇದ್ಯ ಅರ್ಪಿಸಬೇಕು. ದೇವರ. ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ಕೊಡಬಾರದು ಎಂದರು.

ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಕೊಪ್ಪಳ ಜಿಲ್ಲಾ ಆಡಳಿತ, ಕುಷ್ಟಗಿ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಕುಂಬಳಾವತಿ ದ್ಯಾಮಾಂಭಿಕ ಜಾತ್ರೆಯಲ್ಲಿ ಯಾವುದೇ ಪ್ರಾಣಿಗಳ ಬಲಿಯಾಗದಂತೆ ಮುಂಜಾಗ್ರತವಾಗಿ ವ್ಯಾಪಾಕ ಪೊಲೀಸ್ ಬಂದೋಬಸ್ ಮಾಡಲಾಗಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಪಿಎಸ್‌ಐ ಧನುಂಜಯ ಹಿರೇಮಠ, ಗ್ರಾಮಸ್ಥರಾದ ಸುಬ್ಬರಾವ್ ಕುಲಕರ್ಣಿ, ಹುಲ್ಲಪ್ಪ ವಡಿಗೇರಿ, ಪ್ರಕಾಶಸಿಂಗ್ ರಜಪೂತ, ಕಳಕಯ್ಯ ಹಿರೇಮಠ, ಪಕ್ಷಪ್ಪ ಹೊಸಮನಿ, ಶರಣಪ್ಪ ಹನುಮಸಾಗರ, ಶರಣಪ್ಪ ವಡಿಗೇರಿ, ಹನಮಪ್ಪ ಕಂಡೇಕಾರ, ದ್ಯಾಮಣ್ಣ ಗೋನಾಳ, ಶೇಖಪ್ಪ ಕುಂಟೋಜಿ, ಶಿವಮಲ್ಲಪ್ಪ ಕುಂಟೋಜಿ, ಶರಣಪ್ಪ ಗುಡಿ, ಯಲಗೂರದಪ್ಪ ವಡಿಗೇರಿ, ನಾಗಪ್ಪ ಹೊಸಮನಿ ಇತರರಿದ್ದರು.