ಹನುಮಸಾಗರದ ಶ್ರೀ ಕರಿಸಿದ್ಧೇಶ್ವರ ಮಂಗಳ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉಡಿ ತುಂಬುವ ಕಾರ್ಯಕ್ರಮವನ್ನು ಕುದರಿಮೋತಿ ವಿಜಯಮಹಾಂತ ಸ್ವಾಮೀಜಿ ಉದ್ಘಾಟಿಸಿದರು. ವೀರಶೈವ ಲಿಂಗಾಯತ ಸಂಘಟನಾ ಸಮಿತಿ ಅಧ್ಯಕ್ಷ ಪ್ರಶಾಂತ ಗಡಾದ, ಪ್ರಮುಖರಾದ ಅಂದಾನಯ್ಯ ಸೊಪ್ಪಿಮಠ, ಕರಿಸಿದ್ದಪ್ಪ ಕುಷ್ಟಗಿ, ವಿಶ್ವನಾಥ ಕನ್ನೂರು ಇತರರಿದ್ದರು. 
ಜಿಲ್ಲೆ

ಸಮಾಜ ಸುಧಾರಣೆಗೆ ಜೀವನ ಮುಡಿಪಿಟ್ಟಶರಣೆ ಅಕ್ಕಮಹಾದೇವಿ

ಹನುಮಸಾಗರ: ಪ್ರತಿ ಮಹಿಳೆ ಅಕ್ಕಮಹಾದೇವಿ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕುದರಿಮೋತಿ ವಿಜಯಮಹಾಂತ ಸ್ವಾಮೀಜಿ ಹೇಳಿದರು.

ಮಹಿಳೆಯರಿಗೆ ಪ್ರೇರಣೆ

ಅಕ್ಕಮಹಾದೇವಿ ಜಯಂತಿ ನಿಮಿತ್ತ ಪಟ್ಟಣದ ಶ್ರೀ ಕರಿಸಿದ್ದೇಶ್ವರ ಮಠದ ಬಸವ ಮಂಟಪದಲ್ಲಿ ಗುರುವಾರ ಶಿವಶರಣೆ ಅಕ್ಕಮಹಾದೇವಿ ಜೀರ್ಣೋದ್ಧಾರ ಸೇವಾ ಸಮಿತಿ ಏರ್ಪಡಿಸಿದ್ದ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ನಾಡಿನ ಪ್ರಥಮ ಮಹಿಳಾ ಕವಯಿತ್ರಿಯಾದ ಅಕ್ಕಮಹಾದೇವಿ ಇಂದಿನ ಮಹಿಳೆಯರಿಗೆ ಪ್ರೇರಣೆ.

ಧೀರ ಮಹಿಳೆ

ಅಕ್ಕಮಹಾದೇವಿ ಶರಣರ ಚಳವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕ, ಸ್ತ್ರೀವಾದಿ, ಅಕ್ಕರೆಯ ಅಕ್ಕನಾಗಿ ಗುರುತಿಸಲ್ಪಟ್ಟಿದ್ದಾರೆ. ಸಮಾಜ ಸುಧಾರಣೆಗಾಗಿ ಸಣ್ಣ ವಯಸ್ಸಿನಲ್ಲಿ ಜೀವನ ಮುಡಿಪಾಗಿಟ್ಟ ಧೀರ ಮಹಿಳೆಯಾಗಿದ್ದರು ಎಂದರು.

ಅಕ್ಕಮಹಾದೇವಿ ರಾಜೂರು ಪ್ರವಚನ ಪ್ರಸ್ತುತಪಡಿಸಿದರು. ಪ್ರಮುಖರಾದ ಮಹಾಂತೇಶ ಅಗಸಿಮುಂದಿನ, ರಾಚಪ್ಪ ಚಿನಿವಾಲರ, ಸುಭಾಷ್ ಎತ್ತಿನಮನಿ, ಉಮಾದೇವಿ ಗಡಾದ, ಶೋಭಾ ಗಡಾದ, ಸುನೀತಾ ಮಹಾಂತಯ್ಯ ಕೋಮಾರಿ, ಪುಷ್ಪಾ ಚಿನಿವಾಲರ, ಅಕ್ಕಮಹಾದೇವಿ ಲಕ್ಕುಂಡಿ, ಬಸಮ್ಮ ಹಿರೇಮಠ, ಕಾವ್ಯಾ ಬಾಚಲಾಪುರ, ಕಲ್ಯಾಣಮ್ಮ ಹಿರೇಮಠ, ಮಲ್ಲಪ್ಪ ಲಂಗಟದ ಇತರರಿದ್ದರು.

ಹನುಮಸಾಗರದ ಶ್ರೀ ಕರಿಸಿದ್ಧೇಶ್ವರ ಮಂಗಳ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಉಡಿ ತುಂಬಲಾಯಿತು.