ಹನುಮಸಾಗರ: ಶಿಕ್ಷಕರು ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಂಡು ಬಗೆಹರಿಸಿಕೊಳ್ಳಲು ಶಿಕ್ಷಣ ಅದಾಲತ್ ಉಪಯುಕ್ತವಾಗಿದೆ ಎಂದು ಬಿಇಒ ಚನ್ನಬಸಪ್ಪ ಮಗ್ಗದ್ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹನುಮಸಾಗರ ಹಾಗೂ ಹನುಮನಾಳ ವಲಯದ ಶಿಕ್ಷಣ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೂಲ ವೇತನದಲ್ಲಿ ವ್ಯತ್ಯಾಸವಾಗಿದ್ದರೆ, ವೇತನ ಹಿಂಬಾಕಿ, ವೈದ್ಯಕೀಯ ವೆಚ್ಚ ಮರುಪಾವತಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಸಮಸ್ಯೆಗಳ ಸುಳಿಯಲ್ಲಿ ಸಿಲುಕುವುದು ಬೇಡ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಶೈಲ ಸೋಮನಕಟ್ಟಿ, ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಅಹಮದ್ ಆದೋನಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಲಕ್ಷ್ಮಣ್ ಪೂಜಾರಿ, ನೌಕರರ ಸಂಘದ ಪದಾಧಿಕಾರಿಗಳಾದ ಮಲ್ಲಪ್ಪ ಕುದುರೆ, ಮಂಜಪ್ಪ ಪೂಜಾರಿ, ಅಲ್ತಾಫ್ ಹುಸೇನ್, ಹೈದರ್ ಅಲಿ, ಗೌರಮ್ಮ ತಳವಾರ್, ಕಲ್ಪನಾ ಹಂಡೇಕರ್, ಸಿಆರ್‌ಪಿಗಳಾದ ಮಂಜುನಾಥ ಪೂಜಾರಿ, ವಸಂತ ಇತರರಿದ್ದರು.