ಜಹಗೀರಗುಡದೂರಿನ ನಾಲೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕ ದಿನಾಚರಣೆ ನಿಮಿತ್ತ ಕೇಕ್ ಕತ್ತರಿಸಲಾಯಿತು. ಪಿಡಿಒ ನಿಂಗಪ್ಪ ಮೂಲಿಮನಿ, ಗ್ರಾಪಂ ಅಧ್ಯಕ್ಷೆ ನಾಗಮ್ಮ ಸಣ್ಣವಾಲಿಕಾರ, ಉಪಾಧ್ಯಕ್ಷ ವೆಂಕಟೇಶ, ಮಾಜಿ ಅಧ್ಯಕ್ಷ ಕೆ.ಎಸ್. ಹನುಮಂತ, ಸದಸ್ಯರಾದ ಶರಣು ಮಾಲಗಿತ್ತಿ, ದಾನೇಶ ಸಣ್ಣವಾಲಿಕಾರ, ನಾಗರಾಜ ಚವನ್ನವರು ಇತರರಿದ್ದರು. 
ಜಿಲ್ಲೆ

ಗ್ರಾಪಂಗೆ ದಾಖಲೆ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಿ

ಹನುಮಸಾಗರ: ಕಾರ್ಮಿಕ ವರ್ಗಕ್ಕೆ ಪ್ರತಿಯೊಬ್ಬರೂ ಗೌರವ ಸಲ್ಲಿಸಬೇಕು ಎಂದು ಪಿಡಿಒ ನಿಂಗಪ್ಪ ಮೂಲಿಮನಿ ಹೇಳಿದರು. ಸಮೀಪದ ಜಹಗೀರ ಗುಡದೂರು ಗ್ರಾಮದಲ್ಲಿ ನರೇಗಾ ಯೋಜನೆಯ ದುಡಿಯೋಣ ಬಾ ಅಭಿಯಾನದಡಿ ನಾಲ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರ ದಿನಾಚರಣೆ ನಿಮಿತ್ತ ಕೇಕ್ ಕತ್ತರಿಸಿ ಕೂಲಿ ಕಾರ್ಮಿಕರಿಗೆ ಸಿಹಿ ಹಂಚಿ ಮಾತನಾಡಿದರು.

ಮೇ1 ರಿಂದ ಒಂದು ತಿಂಗಳ ಕಾಲ ದುಡಿಯೋಣ ಬಾ ಅಭಿಯಾನ ಆರಂಭವಾಗಿದೆ. ನರೇಗಾ ಯೋಜನೆಯಡಿ ಸ್ವಗ್ರಾಮದಲ್ಲಿ ಕೆಲಸ ನೀಡಲಾಗುತ್ತದೆ. ಗ್ರಾಮಸ್ಥರು ವಲಸೆ ಹೋಗದೆ ಗ್ರಾಪಂನಲ್ಲಿ ಸೂಕ್ತ ದಾಖಲೆ ಸಲ್ಲಿಸಿ ಕೆಲಸ ಪಡೆದುಕೊಳ್ಳಬೇಕು. ನರೇಗಾ ಯೋಜನೆಯಡಿ ಮಹಿಳಾ ಹಾಗೂ ಪುರುಷ ಕೂಲಿಕಾರರಿಗೆ ಸಮಾನ ಕೂಲಿ ನೀಡಲಾಗುತ್ತದೆ. ತಾಪಮಾನ ಹೆಚ್ಚಿರುವುದರಿಂದ ಕೆಲಸ ಪ್ರಮಾಣದಲ್ಲಿ ಶೇ.30 ರಿಯಾಯಿತಿ ಇದೆ. ಸ್ತ್ರೀ ಚೇತನದ ಮೂಲಕ ಮಹಿಳೆಯರಿಗೆ ಕೆಲಸ ನೀಡುವಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ ಎಂದರು.

ಗ್ರಾಪಂ ಅಧ್ಯಕ್ಷೆ ನಾಗಮ್ಮ ಸಣ್ಣವಾಲಿಕಾರ, ಉಪಾಧ್ಯಕ್ಷ ವೆಂಕಟೇಶ, ಮಾಜಿ ಅಧ್ಯಕ್ಷ ಕೆ.ಎಸ್. ಹನುಮಂತ, ಸದಸ್ಯರಾದ ಶರಣು ಮಾಲಗಿತ್ತಿ, ದಾನೇಶ ಸಣ್ಣವಾಲಿಕಾರ, ನಾಗರಾಜ ಚವನ್ನವರು, ಬಿಎಫ್‌ಟಿ ಮಾರುತಿ ಸಾಳುಂಕಿ, ಜಿಕೆಎಂ ರೇಣುಕಾ ಸಾಳುಂಕಿ, ಗ್ರಾಪಂ ಸಿಬ್ಬಂದಿ ಮಹಾಂತೇಶ್ ಸೂಡಿ, ಹನುಮಂತ ಪಡಚಿಂತಿ, ಯಲ್ಲಪ್ಪ, ಕಾಯಕ ಬಂಧುಗಳು, ಕೂಲಿಕಾರರು ಇದ್ದರು.