ಹಿರೇಗೊಣ್ಣಾಗರ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಪಿಎಂಜೆಜೆಬಿವೈ ಅಡಿಯಲ್ಲಿ ಮೃತ ಮಲ್ಲಪ್ಪ ಕಾತ್ರಾಳ ಅವರ ಪತ್ನಿ ಶಶಿಕಲಾ ಅವರಿಗೆ ಶುಕ್ರವಾರ ಎರಡು ಲಕ್ಷ ರೂ. ಪರಿಹಾರದ ಚೆಕ್ ವಿತರಿಸಲಾಯಿತು. ಶಾಖಾ ವ್ಯವಸ್ಥಾಪಕ ಕೆ. ಮನೋಜ್, ಸಿಬ್ಬಂದಿ ಕೆಂಚಪ್ಪ, ಶಿವಕಾಂತ ಅಲ್ಲೂರ ಇತರರಿದ್ದರು. 
ಜಿಲ್ಲೆ

ಪಿಎಂಜೆಜೆಬಿವೈನಿಂದ ಕುಟುಂಬಕ್ಕೆ ಅನುಕೂಲ

ಶ್ರೀನಾಥ

ಹನುಮಸಾಗರ: ಕುಟುಂಬ ಸದಸ್ಯರ ಅನುಕೂಲಕ್ಕಾಗಿ ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬ ಗ್ರಾಹಕರು ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ (ಪಿಎಂಜೆಜೆಬಿವೈ) ವಿಮೆ ಮಾಡಿಸಬೇಕು ಎಂದು ಕರ್ನಾಟಕ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಕೆ. ಮನೋಜ್ ಹೇಳಿದರು.

ಸಮೀಪದ ಹಿರೇಗೊಣ್ಣಾಗರ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಕ್‌ನಲ್ಲಿ ಪಿಎಂಜೆಜೆಬಿವೈ ಅಡಿಯಲ್ಲಿ ಹಾಬಲಕಟ್ಟಿ ಗ್ರಾಮದ ಮಲ್ಲಪ್ಪ ಗುರುಬಸಪ್ಪ ಕಾತ್ರಾಳ ಪತ್ನಿ ಶಶಿಕಲಾ ಅವರಿಗೆ ಶನಿವಾರ ಎರಡು ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು.

ಮಲ್ಲಪ್ಪ ಅವರು ಶಾಖೆಯಲ್ಲಿ ಪಿಎಂಜೆಜೆಬಿವೈ ಅಡಿಯಲ್ಲಿ ಪ್ರತಿ ವರ್ಷ 436 ರೂ. ಪಾವತಿಸಿದ್ದರು. ಅಕಾಲಿಕ ಮರಣ ಹೊಂದಿದ್ದರಿಂದ ಅವರ ಖಾತೆಗೆ ನಾಮನಿರ್ದೇಶಿತರಿದ್ದ ಅವರ ಪತ್ನಿಗೆ ಪರಿಹಾರದ ಮೊತ್ತ ಹಣ ನೀಡಲಾಗುತ್ತಿದೆ. ಪಿಎಂಜೆಜೆಬಿವೈ ಸರ್ಕಾರ ಆರಂಭಿಸಿದ ಸಾಮಾಜಿಕ ಭದ್ರತಾ ಯೋಜನೆ ಆಗಿದೆ ಎಂದರು.

ಬ್ಯಾಂಕ್ ಸಿಬ್ಬಂದಿ ಕೆಂಚಪ್ಪ, ಶಿವಕಾಂತ ಅಲ್ಲೂರ, ಬ್ಯಾಂಕ್ ಮಿತ್ರರಾದ ಶರಣಪ್ಪ ಕಮತಗಿ, ಹನಮಂತ ಮುರಡಿ, ಭೀಮವ್ವ ಗುರಿಕಾರ, ಹೊನ್ನಪ್ಪ ನಾಗರಾಳ, ನಿಂಗರಾಜ ಗಾಳಿ, ಶಿವಪ್ಪ ಕಾತ್ರಾಳ ಇತರರಿದ್ದರು.