ಮದ್ನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಿಮೋಗ್ಲೋಬಿನ್ ತಪಾಸಣಾ ಶಿಬಿರ ನಡೆಯಿತು. ಆರೋಗ್ಯ ಸಹಾಯಕಿ ಪೂರ್ಣಿಮಾ ಆನಂದ, ಆಶಾ ಕಾರ್ಯಕರ್ತೆ ಇಂದುಮತಿ ಮಾಳಶೆಟ್ಟಿ, ಮುಖ್ಯ ಶಿಕ್ಷಕ ಶರಣಪ್ಪ ತುಮರಿಕೊಪ್ಪ, ಶಿಕ್ಷಕರಾದ ಅಶೋಕ ಕಟ್ಟಿಮನಿ, ಲೀಲಾ ಹೂಗಾರ, ಮಮತಾಜ ಬೇಗಂ, ಮಲ್ಲನಗೌಡ ಪೊಲೀಸ್‌ಪಾಟೀಲ್, ಕವಿತಾ ಗೌಡರ, ಚನ್ನಬಸಪ್ಪ ಓತಗೇರಿ, ಯಮನಪ್ಪ ಪೊಲೀಸ್‌ಪಾಟೀಲ್, ಬಸಮ್ಮ ಹಟ್ಟಿ, ಸರೋಜಾ ಇತರರಿದ್ದರು.  
ಜಿಲ್ಲೆ

ಹಸಿ ತರಕಾರಿ, ಹಣ್ಣು ಸೇವಿಸಿ

ಹನುಮಸಾಗರ: ಆಧುನಿಕ ಆಹಾರ ಪದ್ಧತಿಯಿಂದ ಮಕ್ಕಳು ರಕ್ತಹೀನತೆ ಕಾಯಿಲೆಯಿಂದ ಬಳಲುವಂತಾಗಿದೆ ಎಂದು ಆರೋಗ್ಯ ಸಹಾಯಕಿ ಪೂರ್ಣಿಮಾ ಆನಂದ ಹೇಳಿದರು.

ಸಮೀಪದ ಮದ್ನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಹಿಮೋಗ್ಲೋಬಿನ್ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಪ್ರತಿಯೊಂದು ಜೀವಿ ಆರೋಗ್ಯವಾಗಿರಲು ರಕ್ತ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳು ಜಂಕ್‌ಫುಡ್ ಸೇವನೆ ಬಿಡಬೇಕು. ಸರಿಯಾಗಿ ಊಟ ಮಾಡಿದರೆ ದೇಹದಲ್ಲಿ ರಕ್ತ ಉತ್ಪತ್ತಿ ಆಗುತ್ತದೆ. ಹಸಿ ತರಕಾರಿ, ಹಣ್ಣುಗಳನ್ನು ಸೇವಿಸಬೇಕು ಎಂದರು.

ಆಶಾ ಕಾರ್ಯಕರ್ತೆ ಇಂದುಮತಿ ಮಾಳಶೆಟ್ಟಿ, ಮುಖ್ಯ ಶಿಕ್ಷಕ ಶರಣಪ್ಪ ತುಮರಿಕೊಪ್ಪ, ಶಿಕ್ಷಕರಾದ ಅಶೋಕ ಕಟ್ಟಿಮನಿ, ಲೀಲಾ ಹೂಗಾರ, ಮಮತಾಜ ಬೇಗಂ, ಮಲ್ಲನಗೌಡ ಪೊಲೀಸ್‌ಪಾಟೀಲ್, ಕವಿತಾ ಗೌಡರ, ಚನ್ನಬಸಪ್ಪ ಓತಗೇರಿ, ಯಮನಪ್ಪ ಪೊಲೀಸ್‌ಪಾಟೀಲ್, ಬಸಮ್ಮ ಹಟ್ಟಿ, ಸರೋಜಾ ಇತರರಿದ್ದರು.