ಹನುಮಸಾಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು. ಪ್ರಾಚಾರ್ಯ ಸಾಹೇಬಗೌಡ ಬಿರಾದಾರ, ನಿವೃತ್ತ ಪ್ರಾಂಶುಪಾಲ ರಾಜೇಂದ್ರ ಪಂಡಿತ್, ಡಿ.ಬಿ.ಗಡೇದ, ಪಿ.ಎಚ್.ತಳವಾರ, ಎನ್.ವಾಯ್.ಕಟಂಬ್ಳಿ, ಉಪನ್ಯಾಸಕರಾದ ರಾಜೀವ ರಾಜನ್, ಪ್ರೇಮಲತಾ ರೆಡ್ಡಿ, ಶಾಮೀದ ವಾಲಿಕಾರ, ಲಿಂಗರಾಜ ಅಗಸಿಮುಂದಿನ, ಖಾಜಾಸಾಬ ಕಟಗಿ, ಮೈಲಾರಪ್ಪ ಮಡಿವಾಳರ, ಪ್ರಿಯಾಂಕ ದ್ಯಾಮಣ್ಣವರ ಇತರರಿದ್ದರು.  
ಜಿಲ್ಲೆ

ಸಾಧನೆಗೆ ಗುರುವಿನ ಆಶೀರ್ವಾದ ಮುಖ್ಯ

ಕುರುವತ್ತಿ ಶ್ರೀಕಾಂತಪ್ಪ

ಹನುಮಸಾಗರ: ಗುರುಗಳ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರೂ ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಮಣಕವಾಡಿ ಅಭಿನವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಭಾನುವಾರ 2000-01ನೇ ಸಾಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಅಪೂರ್ವ ಸ್ನೇಹ ಸಂಗಮ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗುರುಗಳು ಜೀವನವನ್ನು ಹೇಗೆ ಕಟ್ಟಿಕೊಳ್ಳಬೇಕು ಎಂದು ಕಲಿಸುತ್ತಾರೆ. ಶಿಷ್ಯಂದಿರು ಉನ್ನತ ಹುದ್ದೆ ಹೊಂದಿದಲ್ಲಿ ಗುರುಗಳಿಗೆ ಸಂತೋಷ ಆಗುತ್ತದೆ. ಗುರುವಿನ ಆಶೀರ್ವಾದವಿದ್ದಲ್ಲಿ ಎಲ್ಲವನ್ನೂ ಸಾಧಿಸಬಹುದು ಎಂದರು.