ಹನುಮಸಾಗರದ ಐಟಿಐ ಕಾಲೇಜಿನಲ್ಲಿ ಗುರುವಾರ ಅಪ್ರೆಂಟಿಶಿಪ್(ಎಟಿಎಸ್) ಮೇಳ ನಡೆಯಿತು.  
ಜಿಲ್ಲೆ

ಕಂಪನಿಗೆ 150 ತರಬೇತಿದಾರರು ಆಯ್ಕೆ

ಹನುಮಸಾಗರ: ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2022-24ನೇ ಸಾಲಿನ ತರಬೇತಿದಾರರಿಗೆ ಅಪ್ರೆಂಟಿಶಿಪ್(ಎಟಿಎಸ್) ಮೇಳವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು. ಮೇಳದಲ್ಲಿ 162 ತರಬೇತಿದಾರರು ಪಾಲ್ಗೊಂಡಿದ್ದರು.

ಮೈಸೂರಿನ ಟಿವಿಎಸ್ ಮೋಟರ್ಸ್, ಬೆಂಗಳೂರು ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಮತ್ತು ಕೊಪ್ಪಳದ ಎಂಎಸ್‌ಪಿಎಲ್ ಕಂಪನಿ 150 ತರಬೇತಿದಾರರನ್ನು ಆಯ್ಕೆ ಮಾಡಿಕೊಂಡಿತು. ಕಾಲೇಜು ಪ್ರಾಚಾರ್ಯ ರಮೇಶಕುಮಾರ ಬೋಗಂ, ಕುಷ್ಟಗಿ ಕಾಲೇಜಿನ ಶ್ರೀಕಾಂತ ಸರಗಣಾಚಾರಿ, ಕಿರಿಯ ತರಬೇತಿ ಅಧಿಕಾರಿಗಳಾದ ದಿಲೀಪ ರಾಠೋಡ, ಮಂಜುನಾಥ ಕಂಬಳಿ, ಸಂಜೀವಕುಮಾರ ಇತರರಿದ್ದರು.