ಹನುಮಸಾಗರ: ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಪಿಎಸ್‌ಐ ಧನುಂಜಯ ಹಿರೇಮಠ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ನಿಮಿತ್ತ ಬುಧವಾರ ಹಮ್ಮಿಕೊಂಡ ಶಾಂತಿಸಭೆಯಲ್ಲಿ ಮಾತನಾಡಿದರು.
ಹಬ್ಬಗಳನ್ನು ಶಾಂತಿ ಮತ್ತು ಸೌಹರ್ದದಿಂದ ಆಚರಣೆ ಮಾಡಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ಯಾರಾದರೂ ಶಾಂತಿ ಕದಡಲು ಮುಂದಾದರೆ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು. ಅಹಿತಕರ ಘಟನೆಗೆ ಕಾರಣವಾದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಬ್ಬಗಳ ಆಚರಣೆಯಲ್ಲಿ ಇನ್ನೊಬರಿಗೆ ತೊಂದರೆ ನೀಡಬಾರದು ಎಂದರು.
ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಗ್ರಾಪಂ ಸದಸ್ಯರಾದ ಬಸವರಾಜ ದ್ಯಾವಣ್ಣನವರ, ಶ್ರೀಶೈಲ ಮೋಟಗಿ, ಶಿವಪ್ಪ ಕಂಪ್ಲಿ, ಮಹ್ಮದರೀಯಾಜ್ ಖಾಜಿ, ಮುಖಂಡರಾದ ಸೂಚಪ್ಪ ದೇವರಮನಿ, ಮೈನುದ್ದೀನ್ ಖಾಜಿ, ನೇಮಸಾ ರಂಗ್ರೇಜ್, ನಜೀರಸಾಬ ಮೇಣೆದಾಳ, ಭೀಮಸಾ ದೇವಳೆ, ಜಾವೇದ ಬಳಿಗಾರ, ಮಂಜುನಾಥ ಬಂಡಿವಡ್ಡರ, ಇಕ್ಬಾಲ್ ಇತರರಿದ್ದರು.