ಜಿಲ್ಲೆ

ಪ್ರವಚನದಿಂದ ಚಂಚಲತೆ ದೂರ

ಪ್ರವೀಣ ಉದುಸಾ ದಲಬಂಜನ್

ಹನುಮಸಾಗರ: ಪಟ್ಟಣದ ಅಂಬಾಭವಾನಿ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆಯ 88ನೇ ವರ್ಷದ ನಿಮಿತ್ತ ದೇವಿಗೆ ವಿಶೇಷ ಅಲಂಕಾರದೊಂದಿಗೆ ಬುಧವಾರ ಪೂಜಿಸಲಾಯಿತು. ಪ್ರತಿಷ್ಠಾಪನೆ ನಿಮಿತ್ತ ಹಮ್ಮಿಕೊಂಡಿದ್ದ ಪುರಾಣ ಪ್ರವಚನ ಸಂಜೆ ಮಂಗಳಗೊಂಡಿತು.

ಪ್ರವಚನಕಾರ ಶಿವಶಂಕರ ಮೆದಿಕೇರಿ ಮಾತನಾಡಿ, ದೇವತೆಗಳನ್ನು ಆರಾಧನೆ ಮಾಡಿದರೆ ಮನಸ್ಸು ನಿರ್ಮಲವಾಗಿರುತ್ತದೆ. ಸಕಲ ಸಂಪತ್ತನ್ನು ಪಡೆದುಕೊಳ್ಳಲು ದೇವತೆಗಳ ಆರಾಧನೆ ಮಾಡಬೇಕು. ಪ್ರವಚನ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಅಲ್ಲದೆ ಮನಸ್ಸಿನ ಚಂಚಲತೆ ದೂರವಾಗುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ದೇವಾನು ದೇವತೆಗಳ ಇತಿಹಾಸ ನಮಗೆ ತಿಳಿಯುತ್ತದೆ ಎಂದರು.

ಮೂರ್ತಿ ಪ್ರತಿಷ್ಠಾಪನೆ 88ನೇ ವರ್ಷದ ನಿಮಿತ್ತ ಬೆಳಗ್ಗೆ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಕಲಾವಿದರಾದ ಗೋಪಿನಾಥಸಾ ಕಾಟವಾ, ಶಂಕರಸಾ ಬಸೂದೆ ತಬಲಾ ಹಾಗೂ ಗಾಯಕ ವಿನೋದ ಪಾಟೀಲ್ ಹಾರ್ಮೋನಿಯಂ ಸಾಥ್ ನೀಡಿದರು. ಎಸ್‌ಎಸ್‌ಕೆ ಸಮುದಾಯದ ಸ್ಥಳೀಯ ಅಧ್ಯಕ್ಷ ಭಗೀರಥಸಾ ಪಾಟೀಲ, ಮಹಿಳಾ ಮಂಡಳದ ಪದಾಧಿಕಾರಿಗಳಾದ ಸುನೀತಾ ಕೋಮಾರಿ, ಸುನಂದಾ ಮೆದಿಕೇರಿ, ಭುವನೇಶ್ವರಿ ಸಿನ್ನೂರ, ವಿಜಯಲಕ್ಷ್ಮೀ ಕಾಳಗಿ, ವಿದ್ಯಾ ಸಪಂಡಿ, ವತ್ಸಲ ಸಿನ್ನೂರ, ಗಾಯತ್ರಿ ಸಿನ್ನೂರ, ತುಳಸಾಬಾಯಿ ಕಾಟವಾ, ಸುರೇಖಾ ಕಾಟವಾ, ಅಶ್ವಿನಿ ಕಾಟವಾ ಇತರರಿದ್ದರು.