ಹನುಮಸಾಗರದ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ಶ್ರೀರಾಮ ನವಮಿ ನಿಮಿತ್ತ ತೊಟ್ಟಿಲು ಸೇವೆ ಪೂಜೆ ಸಲ್ಲಿಸಲಾಯಿತು. ಎಸ್‌ಎಸ್‌ಕೆ ಸಮುದಾಯದ ಸ್ಥಳೀಯ ಮಾಜಿ ಅಧ್ಯಕ್ಷ ಮಾರುತಿಸಾ ರಂಗ್ರೇಜ್, ಮುಖಂಡರಾದ ಭೀಮಸಾ ದೇವಳೆ, ಸಕ್ರಪ್ಪ ಬಿಂಗಿ, ಕೃಷ್ಣಸಾ ಕಾಟವಾ, ಅರ್ಚಕ ತಿಪ್ಪಣಸಾ ರಾಯಬಾಗಿ, ಸುಮಿತ ರಾಯಬಾಗಿ, ಜೈಭವಾನಿ ದಾಸ ಭಜನಾ ಮಂಡಳಿ ಸದಸ್ಯರು ಇದ್ದರು. 
ಜಿಲ್ಲೆ

ಅಂಬಾ ಭವಾನಿ ದೇವಸ್ಥಾನದಲ್ಲಿ ತೊಟ್ಟಿಲು ಸೇವೆ

ಹನುಮಸಾಗರ: ಇಲ್ಲಿನ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ಶ್ರೀರಾಮ ನವಮಿ ನಿಮಿತ್ತ ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

\ದೇವಸ್ಥಾನದಲ್ಲಿ ಬೆಳಗ್ಗೆ ಹೋಮ-ಹವನ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಶ್ರೀರಾಮನ ಅವತಾರದ ಅಲಂಕಾರ ಮಾಡಲಾಗಿತ್ತು. ನಂತರ ತೊಟ್ಟಿಲು ಸೇವೆಯ ಮೂಲಕ ಪೂಜೆ ಸಲ್ಲಿಸಲಾಯಿತು. ಜೈ ಭವಾನಿ ದಾಸ ಭಜನಾ ಮಂಡಳಿ ವತಿಯಿಂದ ಭಜನೆ ಸೇವೆ, ತೀರ್ಥ, ಪ್ರಸಾದ ಹಾಗೂ ಪಾನಕ ಸೇವೆ ಸಲ್ಲಿಸಲಾಯಿತು.

ಎಸ್‌ಎಸ್‌ಕೆ ಸಮುದಾಯದ ಸ್ಥಳೀಯ ಮಾಜಿ ಅಧ್ಯಕ್ಷ ಮಾರುತಿ ಸಾ ರಂಗ್ರೇಜ್, ಮುಖಂಡರಾದ ಭೀಮಸಾ ದೇವಳೆ, ಸಕ್ರಪ್ಪ ಬಿಂಗಿ, ಕೃಷ್ಣಸಾ ಕಾಟವಾ, ಅರ್ಚಕ ತಿಪ್ಪಣಸಾ ರಾಯಬಾಗಿ, ಸುಮಿತಾ ರಾಯಬಾಗಿ, ಜೈಭವಾನಿ ದಾಸ ಭಜನಾ ಮಂಡಳಿ ಸದಸ್ಯರಿದ್ದರು.