ಹನುಮಸಾಗರದ ಬನಶಂಕರಿ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ಮಹಿಳಾ ಭಜನಾ ಮಂಡಳಿಯಿಂದ ಸಾಮೂಹಿಕ ದುರ್ಗಾ ಸಪ್ತಶತಿ ಪಠಣ ಜರುಗಿತು. ಮಹಿಳಾ ಮಂಡಳಿ ಸದಸ್ಯರಾದ ಸದಸ್ಯೆ ವಿಜಯಲಕ್ಷ್ಮೀ ಕಾಳಗಿ, ಭುವನೇಶ್ವರಿ ಸಿನ್ನೂರ, ಗಾಯತ್ರಿ ಸಿನ್ನೂರ, ದಾನಮ್ಮ ಸಿನ್ನೂರ, ಇತರರಿದ್ದರು. 
ಜಿಲ್ಲೆ

ಸಪ್ತಶತಿ ಪಠಣದಿಂದ ಫಲ

ಶ್ರೀನಾಥ

ಹನುಮಸಾಗರ: ದೇವರ ನಾಮ ಪಠಿಸುವುದರಿಂದ ಮಾನಸಿಕ ನೆಮ್ಮದಿ ಜತೆಗೆ ಆತ್ಮಸ್ಥೈರ್ಯ ಹೆಚ್ಚಲು ಸಾಧ್ಯ ಎಂದು ಮಹಿಳಾ ಭಜನಾ ಮಂಡಳಿ ಸದಸ್ಯೆ ವಿಜಯಲಕ್ಷ್ಮೀ ಕಾಳಗಿ ಹೇಳಿದರು.

ಪಟ್ಟಣದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ಇತ್ತೀಚೆಗೆ ಹಮ್ಮಿಕೊಂಡಿದ್ದ ದುರ್ಗಾ ಸಪ್ತಶತಿ ಪಠಣೆಯಲ್ಲಿ ಮಾತನಾಡಿದರು. ದುರ್ಗಾ ಸಪ್ತಶತಿ ಪಠಣದಿಂದ ಆರೋಗ್ಯ, ಸಂಪತ್ತು, ಶಾಂತಿ ಮತ್ತು ದೈವಿಕ ಕೃಪೆ ದೊರೆಯುತ್ತದೆ.

ಗ್ರಹದೋಷಗಳು ನಿವಾರಣೆಯಾಗುತ್ತವೆ. ಜೀವನದಲ್ಲಿ ಸಂತೋಷ ನೆಲೆಸುತ್ತದೆ. ದೈಹಿಕ, ಮಾನಸಿಕ ಆರೋಗ್ಯ ಸುಧಾರಣೆಯಾಗುತ್ತದೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇಷ್ಟಾರ್ಥಗಳನ್ನು ಸ್ಮರಿಸಿ ಪಠಿಸಿದರೆ ಉತ್ತಮ ಫಲ ದೊರೆಯುತ್ತದೆ ಎಂದರು.

ಸದಸ್ಯರಾದ ಭುವನೇಶ್ವರಿ ಸಿನ್ನೂರ, ಗಾಯತ್ರಿ ಸಿನ್ನೂರ, ದಾನಮ್ಮ ಸಿನ್ನೂರ, ವತ್ಸಲಾ ಸಿನ್ನೂರ, ವಿದ್ಯಾ ಸಪ್ಪಂಡಿ, ಸುನಂದಾ ಮೆದಿಕೇರಿ, ರೂಪಾ ಯರಗಲ್, ವಿಜಯಾ ಕಾಳಗಿ, ಸುಮಾ ಸಿನ್ನೂರ, ಗಂಗಮ್ಮ, ಶಿಲ್ಪಾ ಸಿನ್ನೂರ, ಸರಸ್ವತಿ ಸಿನ್ನೂರ, ಲಕ್ಷ್ಮೀ, ರಂಜಿತಾ ಹುಲಮನಿ, ಸವಿತಾ ಇತರರಿದ್ದರು.