ಹನುಮಸಾಗರ ಸಮೀಪದ ಬಂಡರಗಲ್ಲ ಗ್ರಾಮದ ಬಳಿ ಕಲ್ಲಿನ ಕ್ಯಾರಿಯ ತ್ಯಾಜ್ಯ ವಿಲೇವಾರಿ ಮಾಡುವಾಗ ಟಿಪ್ಪರ್‌ಗೆ ವಿದ್ಯುತ್ ತಂತಿ ತಾಗಿರುವುದು. 
ಜಿಲ್ಲೆ

ಟಿಪ್ಪರ್‌ಗೆ ವಿದ್ಯುತ್ ತಂತಿ ತಾಗಿ ಚಾಲಕ ಸಾವು

Koppal

ಹನುಮಸಾಗರ: ಸಮೀಪದ ಬಂಡರಗಲ್ಲ ಗ್ರಾಮದಲ್ಲಿ ಗುರುವಾರ ಕಲ್ಲು ಕ್ವಾರಿಯ ತ್ಯಾಜ್ಯ ಬೇರೆಡೆ ವಿಲೇವಾರಿ ಮಾಡುವಾಗ ಟಿಪ್ಪರ್‌ಗೆ ವಿದ್ಯುತ್ ತಂತಿ ತಗುಲಿ ಹೂಲಗೇರಿ ಗ್ರಾಮದ ಚಾಲಕ ಮುತ್ತಣ್ಣ ತೋಪಲಕಟ್ಟಿ (25)ಮೃತಪಟ್ಟಿದ್ದಾನೆ. ಗ್ರಾಮದ ಹೊರ ವಲಯದಲ್ಲಿರುವ ಶ್ರೀ ವಾರಿ ಮಾರುತೇಶ್ವರ ಕಲ್ಲಿನ ಕ್ವಾರಿಯಲ್ಲಿನ ತ್ಯಾಜ್ಯ ತುಂಬಿ ಬೇರೆಡೆ ವಿಲೇವಾರಿ ಮಾಡುತ್ತಿದ್ದ ವೇಳೆ ಲೀಫ್ಟ್ ಎತ್ತಿದಾಗ ವಿದ್ಯುತ್ ತಂತಿ ಟಿಪ್ಪರ್‌ಗೆ ತಾಗಿ ಅವಘಡ ಸಂಭವಿಸಿದೆ.