ಜಿಲ್ಲೆ

50ಕ್ಕೂ ಹೆಚ್ಚು ಬೈಕ್‌ಗಳು ವಶಕ್ಕೆ ಪಡೆದ ಪೊಲೀಸರು

ಹನುಮಸಾಗರ: ಪಟ್ಟಣ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಅನಾವಶ್ಯಕವಾಗಿ ತಿರುಗಾಡುತ್ತಿದ್ದ 50ಕ್ಕೂ ಹೆಚ್ಚು ಬೈಕ್ ಸವಾರರನ್ನು ತಡೆದು ಪಟ್ಟಣದ ಪೊಲೀಸರು ಬುಧವಾರ ಬೈಕ್‌ಗಳನ್ನು ಸೀಜ್ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.

ಲಾಕ್‌ಡೌನ್ ಜಾರಿಯಲ್ಲಿದ್ದರೂ ಕೆಲವರು ಅನಾವಶ್ಯಕವಾಗಿ ಬೈಕ್‌ನಲ್ಲಿ ತಿರಗಾಡುತ್ತಿದ್ದರು. ತಿರುಗಾಡ ಬೇಡಿ ಮನೆಯಲ್ಲಿಯೇ ಇರಿ ಎಂದು ಹೇಳಿದರೂ ಕೇಳುವ ಮನಸ್ಥಿತಿ ಜನರಲ್ಲಿಲ್ಲ. ಆದ್ದರಿಂದ 50ಕ್ಕೂ ಹೆಚ್ಚು ಬೈಕ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನೂ ಮುಂದೆ ಈ ರೀತಿ ಕಂಡು ಬಂದರೆ ಬೈಕ್‌ಗಳನ್ನು ಸೀಜ್ ಮಾಡಿ ವಶಕ್ಕೆ ಪಡೆದುಕೊಳ್ಳಲಾಗುವುದೆಂದು ಪಿಎಸ್‌ಐ ಅಮರೇಶ ಹುಬ್ಬಳ್ಳಿ ಎಚ್ಚರಿಕೆ ನೀಡಿದ್ದಾರೆ.