ಹನುಮಸಾಗರ: ಸಮೀಪದ ತುಮರಿಕೋಪ್ಪ ಗ್ರಾಮದಲ್ಲಿ ಭಾನುವಾರ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಹೋಮ, ಹವನ, ಅಭಿಷೇಕ, ಪಂಚಾಮೃತ, ಅಲಂಕಾರ, ಮಂಗಳಾರತಿ, ನೈವೇದ್ಯ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.
ಸಂಜೆ ಕಳಸ ಮತ್ತು ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ಮನೆಮನೆಗೆ ತೆರಳಿ ಗಂಡಾರತಿ ಹೊರಡಿಸಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗಂಡಾರತಿ ಮೆರವಣಿಗೆ ಮಾಡಲಾಯಿತು. ಮಕ್ಕಳು ಗಂಡಾರತಿ ಹೊತ್ತು ಸಾಗಿದರೆ ಮತ್ತು ಯುವಕರು ಸುತಗಾಯಿ ಹೊಡೆಯುವ ಮೂಲಕ ವಿಜೃಂಭಣೆಯಿಂದ ಕಾರ್ತಿಕೋತ್ಸವ ಆಚರಿಸಿದರು. ಭಕ್ತರು ಜೋಳದ ಚೀಲ ಹೊತ್ತು ದೀರ್ಘ ದಂಡ ನಮಸ್ಕಾರ ಹಾಕಿದರು.