ಶನಿವಾರಸಂತೆ ಹಿಂದು ಜಾಗರಣಾ ವೇದಿಕೆ ವತಿಯಿಂದ ಹನುಮ ಜಯಂತಿ ಪ್ರಯುಕ್ತ 8ರಂದು ನಡೆಯಲಿರುವ ಶೋಭಾಯಾತ್ರಾ ಕಾರ್ಯಕ್ರಮಕ್ಕಾಗಿ ಪಟ್ಟಣದ ಕೆಆರ್‌ಸಿ ವೃತ್ತವನ್ನು ಕೇಸರಿ ತೋರಣದಿಂದ ಅಲಂಕರಿಸಿರುವುದು.  
ಜಿಲ್ಲೆ

ನಾಳೆ ಹನುಮ ಜಯಂತಿ, ಶೋಭಾಯಾತ್ರೆ

ಶಿವಶಂಕರ್ ಎಂ. ಹೆಬ್ಬಳ್ಳ

ಹಿಂದು ಜಾಗರಣಾ ವೇದಿಕೆಯಿಂದ ಸಿದ್ಧತೆ

ಶನಿವಾರಸಂತೆ: ಶನಿವಾರಸಂತೆ ಹಿಂದು ಜಾಗರಣಾ ವೇದಿಕೆ ವತಿಯಿಂದ ಹನುಮ ಜಯಂತಿ ಪ್ರಯುಕ್ತ ಡಿ.8ರಂದು ಹಮ್ಮಿಕೊಂಡಿರುವ 3ನೇ ವರ್ಷದ ಅದ್ದೂರಿ ಶೋಭಾಯಾತ್ರಾ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗಿದೆ.

ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ಕೇಸರಿ ಬಣ್ಣದ ತಳಿರು ತೋರಣದಿಂದ ಅಲಂಕಾರ ಮಾಡಿದ್ದಾರೆ. ಇದರಿಂದ ಪಟ್ಟಣದ ಕೆಆರ್‌ಸಿ ವೃತ್ತ ಕೇಸರಿಮಯಗೊಂಡಿದೆ. ಡಿ.8ರಂದು ಪಟ್ಟಣದ ತ್ಯಾಗರಾಜ ಕಾಲನಿಯಲ್ಲಿರುವ ಚೌಡೇಶ್ವರಿ ಬನದಲ್ಲಿ ಗೋಪೂಜೆಯ ನಂತರ ಶೋಭಯಾತ್ರೆ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಸಂಜೆ 4 ಗಂಟೆಯ ನಂತರ ವಿಜಯ ವಿನಾಯಕ ದೇವಸ್ಥಾನದಲ್ಲಿ ಹೋಮ, ಮಹಾಪೂಜೆ ಮತ್ತು ಮಹಾಮಂಗಳಾರತಿ ನಂತರ ಸಂಜೆ 5 ಗಂಟೆಯಿಂದ ಶೋಭಾಯಾತ್ರಾ ಮೆರವಣಿಗೆ ನಡೆಯಲಿದೆ. ಶೋಭಾಯಾತ್ರೆಯು ಪಟ್ಟಣದ ಮುಖ್ಯರಸ್ತೆ ಮೂಲಕ ಗುಡುಗಳಲೆಯಲ್ಲಿರುವ ಬಸವೇಶ್ವರ ದೇವಸ್ಥಾನ ತಲುಪಿದ ಶನಿವಾರಸಂತೆ ಬೈಪಾಸ್ ರಸ್ತೆ ಮೂಲಕ ವಾಪಸಾಗಿ ಪಟ್ಟಣದ ಕೆಆರ್‌ಸಿ ವೃತ್ತದಲ್ಲಿರುವ ಬನ್ನಿಮಂಟಪದಲ್ಲಿ ಶೋಭಾಯಾತ್ರೆಯನ್ನು ಪೂರ್ಣಗೊಳಿಸಲಾಗುತ್ತದೆ.

ಮೆರವಣಿಗೆಯಲ್ಲಿ ಬೆಳ್ಳಿರಥ, ನಾಸಿಕ್ ಬ್ಯಾಂಡ್, ಚಂಡೆವಾದ್ಯದೊಂದಿಗೆ 3 ಅಡಿ ಎತ್ತರದ ಪಂಚಲೋಹದ ವೀರಾಂಜನೇಯ ಉತ್ಸವ ಮೂರ್ತಿಯನ್ನು ಶೋಭಾಯಾತ್ರಾ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.