ಗೊಳಸಂಗಿ: ಗ್ರಾಮದಲ್ಲಿ ಮರಾಠ ಸಮಾಜದ ನೇತೃತ್ವದಲ್ಲಿ ಹನುಮ ಜಯಂತಿ ಕಾರ್ಯಕ್ರಮಗಳು ಭಾನುವಾರ ವಿಜ್ರಂಭಣೆಯಿಂದ ನಡೆದವು.
ಅಂದು ಬೆಳಗಿನ ಜಾವ 5 ಗಂಟೆಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜಾ ಕೈಂಕರ್ಯಗಳೆಲ್ಲ ನೆರವೇರಿದ ಬಳಿಕ ಬೆಳಗ್ಗೆ 11.30ರ ವೇಳೆಗೆ ದೇವಸ್ಥಾನದ ಕಲಶದ ಮೆರವಣಿಗೆಯು ಮುತ್ತೈದೆಯರ ಮಂಗಳಾರತಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲೆಲ್ಲ ಸಾಗಿ ದೇವಸ್ಥಾನಕ್ಕೆ ಬಂದು ಕಲಶಾರೋಹಣ ಮಾಡಲಾಯಿತು. ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಪಲ್ಲಕ್ಕಿ ಉತ್ಸವವೂ ಸಾಂಗವಾಗಿ ನೆರವೇರಿದವು.
ಮರಾಠ ಸಮಾಜದ ಅಧ್ಯಕ್ಷ ಗಂಗಾರಾಮ ಪವಾರ, ಪ್ರಮುಖರಾದ ನಾರಾಯಣ ಕಿರಗತ, ಮಾರುತಿ ಚವ್ಹಾಣ, ಂಡರಿ ಕಿರಗತ, ಈಶ್ವರ ನಲವಡೆ, ಬಾಬು ಪವಾರ, ಮಾನಾಜಿ ಯಾದವ, ಸಿದ್ದು ಸಾಳುಂಕೆ, ಅಮೃತ ಯಾದವ ಇತರರಿದ್ದರು.