ಜಿಲ್ಲೆ

ಬೆಣಚಿಯಲ್ಲಿ ಹನುಮ ಮೂರ್ತಿ ಪ್ರತಿಷ್ಠಾಪನೆ

ಬಸವರಾಜ ವೀರಪ್ಪ ಗರಗ

ಅಳ್ನಾವರ: ತಾಲೂಕಿನ ಬೆಣಚಿ ಗ್ರಾಮದಲ್ಲಿ ಜ.6, 7ರಂದು ಶ್ರೀ ಹನುಮಾನ ದೇವಸ್ಥಾನದಲ್ಲಿ ಹನುಮಾನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ.

ಜ.6ರಂದು ಬೆಳಗ್ಗೆ 10 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಹನುಮಾನ, ಶ್ರೀ ದತ್ತಾತ್ರೇಯ ಹಾಗೂ ಶ್ರೀ ನಾಗದೇವತೆ ಮೂರ್ತಿಗಳ ಭವ್ಯ ಮೆರವಣಿಗೆ ನಡೆಯಲಿದೆ. ಗಣಪತಿ ಪೂಜೆ ಹಾಗೂ ಹೋಮ ಹವನ ನಡೆದು ಮಧ್ಯಾಹ್ನ ಮಹಾಪ್ರಸಾದ ನಂತರ ಭಜನೆಯೊಂದಿಗೆ ಜಾಗರಣೆ ನಡೆಯಲಿದೆ.

ಜ.7ರಂದು ಬೆಳಗ್ಗೆ ಹನುಮಾನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ವೈಭವೋಪೇತವಾಗಿ ನೆರವೇರಲಿದೆ.

ಬೆಳಗಾವಿಯ ಮುಕ್ತಿಮಠದ ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ಹನುಮಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ನೆರವೇರಿಸುವರು. ಕಿವುಡೆಬೈಲಮಠದ ಶ್ರೀ ಬಾಲಯೋಗಿ ಮಾಣಿಕ್ಯ ಚನ್ನವೃಷಬೆಂದ್ರ ಸ್ವಾಮೀಜಿ, ದೇವರಹುಬ್ಬಳ್ಳಿಯ ಸಿದ್ಧಾಶ್ರಮದ ಶ್ರೀ ಸಿದ್ಧಶಿವಯೋಗಿ ಸ್ವಾಮೀಜಿ ಹಾಗೂ ಪಾರಿಶ್ವಾಡದ ಶ್ರೀ ಶಂಭುಲಿಂಗ ಶಿವಾಚಾರ್ಯಸ್ವಾಮಿಗಳ ಸಮ್ಮುಖದಲ್ಲಿ ಎಲ್ಲ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.