ಯಲಬುರ್ಗಾ: ತಾಲೂಕಿನ ವಜ್ರಬಂಡಿ ಗ್ರಾಮದ ಶ್ರೀ ಹನುಮಂತ ದೇವಾಲಯದಲ್ಲಿ ಕಾರ್ತಿಕೋತ್ಸವ ನಿಮಿತ್ತ ಇತ್ತೀಚಿಗೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.
ಇದನ್ನೂ ಓದಿ: ಹನುಮಂತ ದೇವರ ಕಾರ್ತಿಕೋತ್ಸವ ಅದ್ದೂರಿ
ಬೆಳಗ್ಗೆ ದೇವರ ವಿಗ್ರಹಕ್ಕೆ ವಿಶೇಷ ಅಭಿಷೇಕ, ನಿರ್ಮಾಲ್ಯ ವಿಸರ್ಜನೆ, ವಿಶೇಷ ಪೂಜೆ, ವಾಯುಸ್ತುತಿ ಪುನಶ್ಚರಣ, ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣ, ಪವಮಾನ ಹೋಮ,
ಮಹಾನೈವೇದ್ಯ, ಮಂಗಳಾರತಿ, ಮಹಿಳೆಯರಿಂದ ಸಾಮೂಹಿಕ ಭಜನೆ ಸೇರಿ ವಿವಿಧ ಪೂಜೆಗಳು ನೆರವೇರಿದವು. ಮಳಖೇಡದ ತಿರುಪತಿ ಆಚಾರ (ನಿಡಶೇಸಿ), ರಾಘವೇಂದ್ರ ದೇಸಾಯಿ ಅವರಿಂದ ವಿಶೇಷ ಉಪನ್ಯಾಸ, ಸಂಜೆ ಲಘು ರಥೋತ್ಸವ, ಉತ್ಸವ ಮೂರ್ತಿ ಮೆರವಣಿಗೆ, ದೇಗುಲದಲ್ಲಿ ದೀಪೋತ್ಸವ ಕಾರ್ಯಕ್ರಮ ಜರುಗಿತು.
ಪ್ರಮುಖರಾದ ಪಂ.ಶ್ರೀನಿವಾಸ್ ಆಚಾರ್, ರಾಮರಾವ್ ದೇಸಾಯಿ, ಬಂಡೆರಾವ್ ದೇಸಾಯಿ, ರಾಘವೇಂದ್ರ ದೇಸಾಯಿ, ಅನಿಲ್‌ಕುಮಾರ್ ದೇಸಾಯಿ, ಭೀಮಸೇನ್ ದೇಸಾಯಿ, ಪ್ರಾಣೇಶರಾವ್ ದೇಸಾಯಿ, ಹನುಮೇಶ್ ಆಚಾರ್ ಜೋಶಿ, ವೆಂಕಟೇಶ ದಿಗ್ಗಾವಿ, ಸುರೇಂದ್ರಾಚಾರ್ ಜೋಶಿ, ನರಸಿಂಹ ಮಜುಮದಾರ, ಅನಂತರಾವ್ ದೇಸಾಯಿ, ಗುರುರಾಜ್ ದೇಸಾಯಿ, ಅಡವಿರಾವ್ ಸಾಲಭಾವಿ ಇತರರಿದ್ದರು.