ಗದಗ: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಹೋಮ ಮಾಡುತ್ತಿದ್ದ ವೇಳೆ ಹನುಮ(ಮಂಗ) ಸ್ಥಳಕ್ಕೆ ಆಗಮಿಸಿ ನೆರೆದ ಭಕ್ತರು ಆಶ್ಚರ್ಯಪಡುವಂತಾಯಿತು.
ಶ್ರೀ ರಾಮ ಹಾಗೂ ಮಾರುತಿ ದೇವರ ಪೂಜೆ ವೇಳೆ ದಿಢೀರ್ ಪ್ರತ್ಯಕ್ಷವಾದ ಹನುಮ ಹೋಮ ಮುಗಿಯುವವರೆಗೂ ಸ್ಥಳದಲ್ಲೇ ಇದ್ದು ಅಚ್ಚರಿ ಮೂಡಿಸಿತು. ಯಜ್ಞದ ಸಮಯದಲ್ಲಿ ಮಾರುತಿ ರೂಪದಲ್ಲಿ ಮಂಗ ಬಂದಿದೆ ಎಂದು ನೆರದ ಜನರು ಕೈಮುಗಿದು ಭಕ್ತಿ ಸಮರ್ಪಿಸಿದರು.