ಹನುಮಸಾಗರ ಸಮೀಪದ ಹಿರೇಗೊಣ್ಣಾಗರದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಪ್ರವಚನಕಾರ್ತಿ ಶ್ರೀದೇವಿ ಜಮಖಂಡಿ ಇತರರಿದ್ದರು.  
ಜಿಲ್ಲೆ

ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಿ

ಹನುಮಸಾಗರ: ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದು ಪ್ರವಚನಕಾರ್ತಿ ಶ್ರೀದೇವಿ ಜಮಖಂಡಿ ಹೇಳಿದರು.

ಸಮೀಪದ ಹಿರೇಗೊಣ್ಣಾಗರದ ಶ್ರೀ ನಂದಿಬಸವೇಶ್ವರ 32ನೇ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಪುರಾಣ ಪ್ರವಚನನದಲ್ಲಿ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಿ ಭಾನುವಾರ ಮಾತನಾಡಿದರು.

ಪುರಾಣ ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಇಂದಿನ ಯುವ ಪೀಳಿಗೆಯಲ್ಲಿ ಸಂಸ್ಕಾರ ಇಲ್ಲ. ಮಾನವೀಯ ಗುಣಗಳಂತೂ ಮೊದಲೇ ಇಲ್ಲ. ಇದಕ್ಕೆ ಕಾರಣ ಆಧುನಿಕತೆ ಮತ್ತು ಪಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸದಿರುವುದು. ಉತ್ತಮ ಶಿಕ್ಷಣದ ಜತೆಗೆ ಹಿರಿಯರನ್ನು ಗೌರವಿಸುವಿಸುವುದನ್ನು ಕಲಿಸಬೇಕು. ಶರಣರ ಸಾಹಿತ್ಯ ಓದುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವ ಜತೆಗೆ ದೇಶ, ನಾಡಿನ ಆಚಾರ-ವಿಚಾರಗಳನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದರು.

ಆಕಾಶವಾಣಿ ಕಲಾವಿದ ಮಹೇಶಕುಮಾರ ಬಂಟನೂರ, ಕಲಾವಿದ ಸಚೀನ್ ಪಾಟೀಲ, ಗ್ರಾಮದ ಗುರು ಹಿರಿಯರು, ಯುವಕರು, ಮಹಿಳೆಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.

ವಿವಾಹ ಇಂದು, ತೇರು ನಾಳೆ: ಜಾತ್ರೆ ನಿಮಿತ್ತ ಏ.29ರ ಬೆಳಗ್ಗೆ ಶ್ರೀ ನಂದಿಬಸವೇಶ್ವರಗೆ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚಾನೆ, 108 ಕುಂಭಗಳ ಮೆರವಣಿಗೆ, ಮಧ್ಯಾಹ್ನ ಸಾಮೂಹಿಕ ವಿವಾಹ, ಏ.30ರ ಸಂಜೆ ರಥೋತ್ಸವ ಜರುಗಲಿದೆ.