ಜಿಲ್ಲೆ

ಲಕ್ಕುಂಡಿಯಲ್ಲಿ ಹನುಮ ಮಾಲಾಧಾರಿಗಳ ಶೋಭಾಯಾತ್ರೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್​, ಬಜರಂಗ ದಳ ಹಾಗೂ ಹನುಮ ಮಾಲಾಧಾರಿಗಳ ಸೇವಾ ಸಮಿತಿಯ ಆಶ್ರಯದಲ್ಲಿ ಶುಕ್ರವಾರ ಸಂಜೆ ಶೋಭಾ ಯಾತ್ರೆಯು ಭಕ್ತಿ ಭಾವದಿಂದ ನಡೆಯಿತು.
ಗ್ರಾಮದ ಪ್ರಮುಖ ಬೀದಿಯಲ್ಲಿ ಹನುಮಂತ ಮತ್ತು ಶ್ರೀರಾಮನ ಮೂತಿರ್ ಮೆರವಣಿಗೆಯೊಂದಿಗೆ ನಡೆದ ಶೋಭಾಯಾತ್ರೆಯಲ್ಲಿ 100 ಜನ ಮಾಲಾಧಾರಿಗಳು ಭಾಗವಹಿಸಿದ್ದರು. ರಸ್ತೆಯುದ್ದಕ್ಕೂ ಜೈ ಹನುಮಾನ, ಜೈ ಶ್ರೀರಾಮ ೂಷಣೆಗಳೊಂದಿಗೆ ಹನುಮಂತ, ರಾಮನ ಕುರಿತ ಭಜನೆ ಮೊಳಗಿತು. ಶೋಭಾಯಾತ್ರೆಗೆ ಭಕ್ತರು ದೇಣಿಗೆ ನೀಡಿದರು. ಶೋಭಾ ಯಾತ್ರೆಗೂ ಪೂರ್ವದಲ್ಲಿ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಬೆಳಗ್ಗೆ ರುದ್ರಾಭಿಷೇಕದೊಂದಿಗೆ ವಿಶೇಷ ಪೂಜೆ ಜರುಗಿದವು.