ಜಿಲ್ಲೆ

ನೇಣು ಬಿಗಿದುಕೊಂಡು ತಾಯಿ-ಮಗ ಆತ್ಮಹತ್ಯೆ

Belagavi

ಬೆಳಗಾವಿ: ಆರ್ಥಿಕ ಸಂಕಷ್ಟದಿಂದ ಮನೊಂದು ತಾಯಿ, ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹಲಗಾದಲ್ಲಿ ಗುರುವಾರ ನಡೆದಿದೆ. ಹಲಗಾ ಗ್ರಾಮದ ಭಾರತಿ ಶೇಖರ ದೇಸಾಯಿ (35) ಹಾಗೂ ಪ್ರಜ್ವಲ್ ಶೇಖರ ದೇಸಾಯಿ (14) ಆತ್ಮಹತ್ಯೆ ಮಾಡಿಕೊಂಡವರು.

ಕೆಲ ವರ್ಷಗಳಿಂದ ಹಲಗಾದಲ್ಲಿ ಕೂಲಿ ಮಾಡಿಕೊಂಡು ವಾಸಗಿದ್ದ ಈ ಕುಟುಂಬಕ್ಕೆ ಕರೊನಾ ದಿಂದ ಜಾರಿಗೊಳಿಸಿದ್ದ ಲಾಕ್‌ಡೌನ್‌ನಿಂದಾಗಿ ಸರಿಯಾಗಿ ಕೂಲಿ ಸಿಗದೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಇದರಿಂದ ಮನನೊಂದ ಭಾರತಿ ಹಾಗೂ ಪ್ರಜ್ವಲ್, ಹಲಗಾ ಗ್ರಾಮದಲ್ಲಿರುವ ಸ್ವೀಟ್‌ಮಾರ್ಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಮಹಿಳೆಯ ಸಹೋದರ ದೂರಿನಲ್ಲಿ ತಿಳಿಸಿದ್ದಾರೆ. ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.