ಗದಗ ನಗರದಲ್ಲಿ ನಡೆದ ನಾಲ್ವರ ಹತ್ಯೆಗೆ ಕಾರಣರಾದ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಇಳಕಲ್ಲದಲ್ಲಿ ಶನಿವಾರ ಎಸ್‌ಎಸ್‌ಕೆ ಸಮಾಜ ವತಿಯಿಂದ ತಹಸೀಲ್ದಾರ್ ಎಸ್.ಬಿ. ಕೂಡಲಗಿ ಅವರಿಗೆ ಮನವಿ ಸಲ್ಲಿಸಲಾಯಿತು. ತರುಣ ಸಂಘದ ಅಧ್ಯಕ್ಷ ಜಮುನಾದಾಸ ಕಾಟವಾ, ಎಸ್‌ಎಸ್‌ಕೆ ಹಿತರಕ್ಷಣಾ ಸಮಿತಿ ಜಿಲ್ಲಾ ಸಂಚಾಲಕ, ನಾಗರಾಜ ನಗರಿ, ರವಿ ಬಸವಾ, ಶ್ರೀಕಾಂತ ಕಾಟವಾ ಇತರರಿದ್ದರು. 
ಜಿಲ್ಲೆ

ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ

ದತ್ತಾತ್ರೇಯ ಪಿ ಕುಲಕರ್ಣಿ

ಇಳಕಲ್ಲ: ಗದಗ ನಗರದ ದಾಸರ ಓಣಿಯಲ್ಲಿ ನಡೆದ ಎಸ್‌ಎಸ್‌ಕೆ ಸಮಾಜದ ನಾಲ್ವರ ಭೀಕರ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಎಸ್‌ಎಸ್‌ಕೆ ಸಮಾಜ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಸಮಾಜದ ಮುಖಂಡರು ಮಾತನಾಡಿ, ಮದುವೆಗೆಂದು ಕೊಪ್ಪಳದ ಭಾಗ್ಯನಗರದಿಂದ ಆಗಮಿಸಿದ್ದ ಪರಶುರಾಮ ಹಾದಿಮನಿ, ಲಕ್ಷ್ಮ್ಮೀಬಾಯಿ ಹಾದಿಮನಿ, ಆಕಾಂಶಿ ಹಾದಿಮನಿ ಮತ್ತು ಗದಗ ನಗರಸಭೆ ಉಪಾಧ್ಯಕ್ಷೆ ಪುತ್ರ ಕಾರ್ತಿಕ ಬಾಕಳೆಯನ್ನು ಮಚ್ಚಿನಿಂದ ಕೊಲೆ ಮಾಡಿದ್ದು ಅತ್ಯಂತ ಘೋರ ಸಂಗತಿಯಾಗಿದೆ.
ಒಂದು ವೇಳೆ ದುಷ್ಕರ್ಮಿಗಳನ್ನು ಬಂಧಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿ ತಹಸೀಲ್ದಾರ್ ಎಸ್.ಬಿ. ಕೂಡಲಗಿ ಅವರಿಗೆ ಮನವಿ ಸಲ್ಲಿಸಿದರು.

ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ಏಕನಾಥಸಾ ರಾಜೊಳ್ಳಿ, ತರುಣ ಸಂಘದ ಅಧ್ಯಕ್ಷ ಜಮುನಾದಾಸ ಕಾಟವಾ, ಎಸ್‌ಎಸ್‌ಕೆ ಹಿತರಕ್ಷಣಾ ಸಮಿತಿ ಜಿಲ್ಲಾ ಸಂಚಾಲಕ ನಾಗರಾಜ ನಗರಿ, ರವಿ ಬಸವಾ, ಶ್ರೀಕಾಂತಸಾ ಕಾಟವಾ, ನಾಗರಾಜ ಚವ್ಹಾಣ, ಯಲ್ಲೂಸಾ ಬಸೂದೆ, ಪರಶುರಾಮ ರಾಜೋಳ್ಳಿ, ಪರಶುರಾಮ ರಾಯಬಾಗಿ ಮತ್ತಿತರರಿದ್ದರು.