ಚಿಕ್ಕಬಳ್ಳಾಪುರ: ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಿ ಪ್ರೋತ್ಸಾಹಿಸುವ ಯೋಜನೆಗಳಿಗೆ ಭರಪೂರ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ಲಾನುಭವಿಗಳ ಆಯ್ಕೆ ಸಂಖ್ಯೆ ಮಾತ್ರ ಬೆರಳೆಣಿಕೆಯಲ್ಲಿದೆ.
ಕಳೆದ 2023-24 ನೇ ಸಾಲಿನ ಉದ್ಯೋಗಿನಿ ಯೋಜನೆಯಡಿ ಜಿಲ್ಲೆಯಲ್ಲಿ 21 ಗುರಿಯನ್ನು ನಿಗದಿಪಡಿಸಿದ್ದು, ಬರೋಬ್ಬರಿ 3,817 ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನು ಆಯ್ಕೆಯಾದ ಲಾನುಭವಿಗಳ ಪೈಕಿ 13 ಮಂದಿಗೆ ಬ್ಯಾಂಕುಗಳಿಂದ ನಿಯಮಾನುಸಾರ ಸಾಲ ಮಂಜೂರಾಗಿದೆ. ಉಳಿದಂತೆ 8 ಮಂದಿ ಸೌಲಭ್ಯದ ನಿರೀಕ್ಷೆಯಲ್ಲಿದ್ದಾರೆ.
ವಿವಿಧ ಯೋಜನೆಗಳು: ಲೈಂಗಿಕ ವೃತ್ತಿ ನಿರತ ಮಹಿಳೆಯರು, ಎಚ್‌ಐವಿ ಸೋಂಕಿತರು, ಲಿಂಗತ್ವ ಅಲ್ಪಸಂಖ್ಯಾತರು ಸೇರಿ ವಿವಿಧ ವಲಯಗಳ ಮಹಿಳೆಯರ ಅಭಿವೃದ್ಧಿಗಾಗಿ ಸರ್ಕಾರವು ವಿವಿಧ ಯೋಜನೆಗಳನ್ನು ರೂಪಿಸಿದೆ. ಉದ್ಯೋಗಿನಿ ಯೋಜನೆಯಡಿ ನಿರುದ್ಯೋಗಿ ಸೀಯರು ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ 3 ಲಕ್ಷ ರೂ.ವರೆಗೂ ಬ್ಯಾಂಕ್ ಸಾಲವನ್ನು ಕೊಡಿಸಲಾಗುತ್ತದೆ. ಇದಕ್ಕೆ ಮಹಿಳಾ ಅಭಿವೃದ್ಧಿ ನಿಮಗದಿಂದ ಸಾಮಾನ್ಯ ವರ್ಗದವರಿಗೆ, ವಿಶೇಷ ವರ್ಗದವರಿಗೆ ಶೇ.30 ರಷ್ಟು, ಎಸ್ಸಿ ಎಸ್ಟಿ ಲಾನುಭವಿಗಳಿಗೆ ಶೇ.50 ಸಹಾಯ ಧನ ನೀಡಲಾಗುತ್ತದೆ. ಲೈಂಗಿಕ ಕಾರ್ಯಕರ್ತೆಯರಿಗೆ ಪುನರ್‌ವಸತಿ ಕಲ್ಪಿಸಲು ಚೇತನಾ ಯೋಜನೆಯಡಿ ನೇರವಾಗಿ 30 ಸಾವಿರ ರೂ. ಆರ್ಥಿಕ ನೆರವು, ಎಚ್‌ಐವಿ ಸೋಂಕಿತರು, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದು ಸಂಕಷ್ಟಕ್ಕೊಳಗಾಗಿರುವ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಧನಶ್ರೀ ಯೋಜನೆಯಡಿ ನೇರವಾಗಿ 30 ಸಾವಿರ ರೂ, ಲಿಂಗತ್ವ ಅಲ್ಪಸಂಖ್ಯಾತರು ಸಮಾಜದಲ್ಲಿ ಗೌರವಯುತ ಜೀವನ ನಡೆಸುವಂತಾಗಲು 30 ಸಾವಿರ ರೂ, ನೀಡಲಾಗುತ್ತದೆ. ಮಹಿಳಾ ತರಬೇತಿ ಯೋಜನೆಯಡಿ ಮಹಿಳೆಯರಿಗೆ ಟೇಲರಿಂಗ್, ಬ್ಯೂಟಿ ಪಾರ್ಲರ್, ಕಂಪ್ಯೂಟರ್, ಪ್ರಿಂಟಿಂಗ್ ಶಿಕ್ಷಣ, ಗಾರ್ಮೆಂಟ್ಸ್, ಕಸೂತಿ ಸೇರಿ ಕೌಶಲ ತರಬೇತಿ ನೀಡಿ, ಉದ್ದಿಮೆಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಲಾಗುತ್ತಿದೆ.
ಆ್ಯಸಿಡ್ ಸಂತ್ರಸ್ತೆಗೆ ನೆರವು: ಆಸಿಡ್ ದಾಳಿ ಸಂತ್ರಸ್ತೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಗೆಳತಿ ಯೋಜನೆಯನ್ನು ಜಾರಿಗೊಳಿಸಿದ್ದು, ಇದರಡಿ ಗರಿಷ್ಠ 5 ಲಕ್ಷ ರೂ.ವರೆಗೂ ಬಡ್ಡಿ ರಹಿತ (ಶೇ.50 ರಷ್ಟು ಸಾಲ ಮತ್ತು ಶೇ.50 ರಷ್ಟು ಸಹಾಯಧನ) ಆರ್ಥಿಕ ಸೌಲಭ್ಯ ಮತ್ತು ರಾಜೀವ್ ಗಾಂಧಿ ವಸತಿ ನಿಗಮದಡಿ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಒಂದು ಆಸಿಡ್ ದಾಳಿ ಪ್ರಕರಣ ವರದಿಯಾಗಿದ್ದು, ಆ ಮಹಿಳೆಗೆ ಜೆರಾಕ್ಸ್ ಮತ್ತು ಸ್ಟೇಷನರಿ ಅಂಗಡಿ ಪ್ರಾರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ವಸತಿ ಸೌಲಭ್ಯ: ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೈಗೊಂಡಿದ್ದ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆಯಲ್ಲಿ 13 ಲಿಂಗತ್ವ ಅಲ್ಪಸಂಖ್ಯಾತ ಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಮನೆ ನಿರ್ಮಿಸಿಕೊಡಲು ರಾಜೀವ್ ಗಾಂಧಿ ವಸತಿ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.