ಶ್ರೀ ಕ್ಷೇತ್ರದಿಂದ ಮಂಜೂರಾದ ವೀಲ್‌ಚೇರ್‌ನ್ನು ಅನಾರೋಗ್ಯದಿಂದ ಬಳಲುತ್ತಿದ್ದ ಕೋಟದ ಪಡುಕೆರೆ ನಿವಾಸಿ ಮರ್ಲಿ ಮರಕಾಲ್ತಿ ಅವರಿಗೆ ನೀಡಲಾಯಿತು 
ಜಿಲ್ಲೆ

ಜನಮಂಗಳ ಕಾರ್ಯಕ್ರಮದಡಿ ವೀಲ್‌ಚೇರ್ ಹಸ್ತಾಂತರ

ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಬ್ರಹ್ಮಾವರ ತಾಲೂಕು ಕೋಟ ವಲಯ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರದಿಂದ ಮಂಜೂರಾದ ವೀಲ್‌ಚೇರ್‌ನ್ನು ಅನಾರೋಗ್ಯದಿಂದ ಬಳಲುತ್ತಿದ್ದ ಕೋಟದ ಪಡುಕೆರೆ ನಿವಾಸಿ ಮರ್ಲಿ ಮರಕಾಲ್ತಿ ಅವರಿಗೆ ನೀಡಲಾಯಿತು. ಕೋಟ ಗ್ರಾಪಂ ಸದಸ್ಯೆ ರತ್ನ, ವಲಯ ಮೇಲ್ವಿಚಾರಕಿ ನೇತ್ರಾವತಿ, ಒಕ್ಕೂಟ ಅಧ್ಯಕ್ಷ ಜಯಂತಿ,ಪದಾಧಿಕಾರಿ ಗೀತಾ, ತರಬೇತಿ ಮೇಲ್ವಿಚಾರಕಿ ಶಾಂತಾ ಉಪಸ್ಥಿತರಿದ್ದರು.