ಜಿಲ್ಲೆ

ವಿಶೇಷ ಮಕ್ಕಳ ಶಾಲೆಗೆ ವಾಹನ ಹಸ್ತಾಂತರ

ಕಾರ್ಕಳ: ಎಂಆರ್‌ಪಿಎಲ್ ವತಿಯಿಂದ ಕಾರ್ಕಳ ಕುಕ್ಕುಂದೂರಿನ ವಿಜೇತ ವಿಶೇಷ ಶಾಲೆಗೆ ವಾಹನ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಎಂಆರ್‌ಪಿಎಲ್ ಸಿಜಿಎಂ ಅಡ್ಮಿನಿಸ್ಟ್ರೇಶನ್ ಮನೋಜ್ ಕುಮಾರ್ ವಾಹನ ಕೀ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಎಂಆರ್‌ಪಿಎಲ್‌ನ ಸಾಮಾಜಿಕ ಬದ್ಧತೆ ಗುರುತಿಸಿ ಸಂಸ್ಥೆ ವತಿಯಿಂದ ಮನೋಜ್ ಕುಮಾರ್.ಎ. ಅವರನ್ನು ಗೌರವಿಸಲಾಯಿತು. ಶ್ರೀ ದುರ್ಗಾ ವಿದ್ಯಾ ಸಂಘ ಅಧ್ಯಕ್ಷ ಕೆ.ರಾಧಾಕೃಷ್ಣ ಶೆಟ್ಟಿ, ವಿಜೇತ ವಿಶೇಷ ಶಾಲಾ ಮ್ಯಾನೇಜಿಂಗ್ ಟ್ರಸ್ಟಿ ಹರೀಶ್, ಸಂಸ್ಥಾಪಕಿ ಡಾ.ಕಾಂತಿ ಹರೀಶ್ ಉಪಸ್ಥಿತರಿದ್ದರು. ವಿಶೇಷ ಶಿಕ್ಷಕಿ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು. ವಿಶೇಷ ಶಿಕ್ಷಕ ಯಮುನಪ್ಪ ವಂದಿಸಿದರು.