ವಿಜಯವಾಣಿ ಸುದ್ದಿಜಾಲ ಉಡುಪಿ
ಶತಮಾನ ಕಂಡ ಕರ್ಣಾಟಕ ಬ್ಯಾಂಕ್ ಪ್ರತಿವರ್ಷ ತಾನು ಬೆಳೆದದ್ದಲ್ಲದೆ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯ ಮೂಲಕ ಸಮಾಜದ ಬೆಳೆವಣಿಗೆಗೂ ಸಹ ಅತ್ಯಮೂಲ್ಯ ಕೊಡುಗೆ ನೀಡುತ್ತ ಬಂದಿದೆ. ಇದು ಅನುಕರಣೀಯ ಕಾರ್ಯ. ಸಮಾಜದ ಅಭಿವೃದ್ಧಿಯಲ್ಲಿ ಹಣಕಾಸು ಸಂಸ್ಥೆಗಳ ಪಾತ್ರವೂ ಪ್ರಮುಖವಾಗಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಕರ್ಣಾಟಕ ಬ್ಯಾಂಕ್ನ ಉಡುಪಿ ಪ್ರಾದೇಶಿಕ ಕಚೇರಿಯಲ್ಲಿ ಮಾ.4ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬ್ಯಾಂಕ್ನ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯ ಚಟುವಟಿಕೆಯಡಿ ಉಡುಪಿಯ ಕೈಪುಂಜಾಲು, ಕಾಪು, ವಿಶ್ವೇಶ ತೀರ್ಥ ವಿದ್ಯಾಲಯಕ್ಕೆ ಶಾಲಾ ಬಸ್ ಹಸ್ತಾಂತರಿಸಿ ಆಶೀರ್ವಚನ ನೀಡಿದರು.
ಕರ್ಣಾಟಕ ಬ್ಯಾಂಕ್ನ ಜಿಎಂ ವಿನಯ್ ಭಟ್, ಪ್ರಾದೇಶಿಕ ಕಚೇರಿಯ ಮುಖ್ಯಸ್ಥ (ಎಜಿಎಂ) ವಾದಿರಾಜ್ ಭಟ್ ಕೆ., ಡೆಪ್ಯುಟಿ ರೀಜನಲ್ ಹೆಡ್ ಮನೋಜ್ ಕೋಟ್ಯಾನ್, ಚೀಫ್ ಮೆನೇಜರ್ ಪ್ರದೀಪಕುಮಾರ್, ಶಾಲಾ ಸಮಿತಿಯ ಅಧ್ಯಕ್ಷ ಸತೀಶಕುಮಾರ್, ಬೆಂಗಳೂರಿನ ಮೆಸರ್ಸ್ ಎಸ್ ಡಿಸೈನರ್ಸ್ ಲಿಮಿಟೆಡ್ನ ಮಾಲೀಕ ಪಿ.ರಾಮದಾಸ್ ಮಾದಮಣ್ಣಾಯ, ಬ್ಯಾಂಕ್ನ ಸ್ಥಳೀಯ ಶಾಖಾ ಪ್ರಬಂಧಕರು ಹಾಗೂ ಪ್ರಾದೇಶಿಕ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.