ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದು ಹೋಗಿದ್ದ ಮೊಬೈಲ್ ಫೋನ್‌ಗಳನ್ನು ಪಿಎಸ್‌ಐ ಎಂ.ಬಿ .ಶೋಭಾ ಮಾಲೀಕರಿಗೆ ಹಿಂದಿರುಗಿಸಿದರು.  
ಜಿಲ್ಲೆ

ಮಾಲೀಕರಿಗೆ ಮೊಬೈಲ್‌ಗಳ ಹಸ್ತಾಂತರ

ಬೇಲೂರು: ಕಳೆದು ಹೋಗಿದ್ದ ಮೊಬೈಲ್ ಫೋನ್‌ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿ ಮಾಲೀಕರಿಗೆ ವಾಪಸ್ ನೀಡಲಾಗಿದೆ.

ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದು ಹೋಗಿದ್ದ ಹಲವರ ಮೊಬೈಲ್ ಫೋನ್‌ಗಳನ್ನು ಪಿಎಸ್‌ಐ ಎಂ.ಬಿ.ಶೋಭಾ ನೇತೃತ್ವದ ತಂಡ, ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಮಾಲೀಕರಿಗೆ ಅವರ ಫೋನ್‌ಗಳನ್ನು ಒಪ್ಪಿಸಿದೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.