ಕೋಟ: ಕೋಟದ ನಾಗೇಂದ್ರ ಪುತ್ರನ್ ಸಂಯೋಜನೆಯಲ್ಲಿ ಗೋವಿಗಾಗಿ ನಾವು ಪ್ರಚಾರಕ್ಕಲ್ಲ ಪ್ರೇರಣೆಗಾಗಿ ಕಾರ್ಯಕ್ರಮ ನಡೆಯುತ್ತಿದ್ದು, ಇದರ ಅನ್ವಯ ಗೋಪಾಡಿ ಹೂವಿನಕೆರೆಮಠದ ಗೋ ಶಾಲೆಗೆ ಮೇವು ಹಸ್ತಾಂತರಿಸಲಾಯಿತು.
ಕೋಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿ ಪ್ರವೀಣ್ ಕುಮಾರ್ ಗಡಿಯಾರ್ ಹಸಿಹುಲ್ಲನ್ನು ಕೊಡುಗೆಯಾಗಿ ನೀಡುವ ಮೂಲಕ ಚಾಲನೆ ನೀಡಿದರು. ಕಾಂಗ್ರೆಸ್ ಮುಖಂಡ ಗೋಪಾಲ ಬಂಗೇರ ಶುಭಹಾರೈಸಿದರು. ಮುಖಂಡರಾದ ವಿಜಯ ಶೆಟ್ಟಿ ಆವರ್ಸೆ, ಸುನೀಲ್ ಶೆಟ್ಟಿ ಕಾವಡಿ, ಅಚ್ಯುತ್ ಕಾಂಚನ್ ಕಾವಡಿ, ಭರತ್ ಗಾಣಿಗ ಕೋಟ, ಮಣೂರು ರಾಜು ಉಪಸ್ಥಿತರಿದ್ದರು.