ಚೋರಡಿಯಲ್ಲಿ ಹಮ್ಮಿಕೊಂಡಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಡಿ.ಎಸ್.ಅರುಣ್ ಫಲಾನುಭವಿಗಳಿಗೆ ಸಿಲಿಂಡರ್ ಹಸ್ತಾಂತರಿಸಿದರು. ನಿರಂಜನ್ ಗೌಡ, ಅಶೋಕ್, ಶಿವಕುಮಾರ್ ಇತರರಿದ್ದರು. 
ಜಿಲ್ಲೆ

ಫಲಾನುಭವಿಗಳಿಗೆ ಸಿಲಿಂಡರ್ ಹಸ್ತಾಂತರ

ಆಯನೂರು: ಚೋರಡಿ ಗ್ರಾಮದಲ್ಲಿ ಸೋಮವಾರ ಗ್ರಾಪಂ ಆವರಣದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಚಾಲನೆ ನೀಡಿದರು. ಜಲಜೀವನ ಮಿಷನ್, ಕಿಸಾನ್ ಸಮ್ಮಾನ್, ಜನೌಷಧ ಗ್ಯಾಸ್, ಆಯುಷ್ಮಾನ್ ಭಾರತ ಇನ್ನಿತರ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಉಜ್ವಲ ಯೋಜನೆಯಲ್ಲಿ ಗ್ಯಾಸ್ ಸಂಪರ್ಕ ಪಡೆದ ಫಲಾನುಭವಿಗೆ ಸಿಲಿಂಡರ್ ಹಸ್ತಾಂತರಿಸಿದರು. ಚೋರಡಿ ಗ್ರಾಪಂ ಅಧ್ಯಕ್ಷ ನಿರಂಜನ್ ಗೌಡ, ಸದಸ್ಯರಾದ ಅಶೋಕ್, ಶಿವಕುಮಾರ್, ಎಸ್‌ಬಿಐ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕರು, ಪಿಡಿಒ ಪರಮೇಶ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶುಶ್ರೂಷಕಿಯರು ಇದ್ದರು.