ವಿಜಯಪುರ: ನಗರದ ಪ್ರತಿಷ್ಠಿತ ಬಿಎಲ್ಡಿಇ ಸಂಸ್ಥೆಯ ಫ.ಗು. ಹಳಕಟ್ಟಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗಕ್ಕೆ ಬೆಂಗಳೂರಿನ ಬಿಡದಿಯ ಟೊಯೋಟಾ ಕಿಲೋರ್ಸ್ಕರ್ ಮೋರ್ಟಸ್ ಕಂಪನಿ ತಯಾರಿಸಿದ ಬಿಎಸ್ 6 ಎಂಜಿನ್ ಮತ್ತು ಇನ್ನಿತರ ಪ್ರಚಲಿತ ಉನ್ನತ ತಂತ್ರಾನ ಹೊಂದಿರುವ ಫಾರ್ಚುನರ್ ವಾಹನದ ಚಾಸಿಸ್ನ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಕಟ್ ಸೆನ್ ಮಾದರಿ ಪ್ರಾತ್ಯಕೆಯನ್ನು ಗುರುವಾರ ಹಸ್ತಾಂತರಿಸಲಾಯಿತು.
ಸಂಸ್ಥೆ ಅಧ್ಯರೂ ಆದ ಸಚಿವ ಎಂ.ಬಿ. ಪಾಟೀಲ ಅವರ ಆಶಯದಂತೆ ಆಗಿರುವ ತಿಳಿವಳಿಕೆ ಒಪ್ಪಂದ(ಎಂಒಯು)ದ ಭಾಗವಾಗಿ ಮಹಾವಿದ್ಯಾಯದ ಮೆಕ್ಯಾನಿಕಲ್ ವಿಭಾಗದ ಆಯ್ದ ಬೋಧಕ ಮತ್ತು ತಾಂತ್ರಿಕ ಸಿಬ್ಬಂದಿಗೆ ತರಬೇತಿ ನೀಡುವ ಮೂಲಕ ಪ್ರಾತ್ಯಕೆಗಳನ್ನು ನೀಡಿದರು.
ಮೆಕ್ಯಾನಿಕಲ್ ವಿಭಾಗದ ಬಾಷ್ ಪ್ರಯೋಗಾಯದಲ್ಲಿ ಪ್ರಾಚಾರ್ಯ ಡಾ. ವಿ.ಜಿ. ಸಂಗಮ ಪ್ರಾತ್ಯಕ್ಷಿಕೆಗಳನ್ನು ಅನಾವರಣಗೊಳಿಸಿ ಮಾತನಾಡಿ, ಟೊಯೋಟಾ ಕಂಪನಿಯವರು ಒದಗಿಸಿದ ಈ ಸೌಲಭ್ಯವನ್ನು ಎಲ್ಲ ತಾಂತ್ರಿಕ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಡೆದುಕೊಂಡು ಭವಿಷ್ಯದಲ್ಲಿ ಆಟೋಮೊಬೈಲ್ ಉದ್ಯಮ ಹಾಗೂ ರಸ್ತೆ ಸಾರಿಗೆ ತಂತ್ರಾನದಲ್ಲಿ ಆಗುತ್ತಿರುವ ಅಭಿವೃದ್ಧಿಯ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವು ವಿದ್ಯಾರ್ಥಿಗಳಿಗೆ ಆಟೋಮೊಬೈಲ್ ಮತ್ತು 3ಡಿ ಮುದ್ರಣ ತಂತ್ರಾನಗಳಲ್ಲಿ ತರಬೇತಿ ನೀಡಲು ಶ್ರೇಷ್ಠತಾ ಕೇಂದ್ರ ಸ್ಥಾಪಿಸಿದೆ. ಈ ಸೌಲಭ್ಯವು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.
ಉಪ ಪ್ರಾಚಾರ್ಯ ಡಾ. ಪಿ.ವಿ. ಮಾಳಜಿ, ಡಾ. ಲೀನಾ ರಾಘಾ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಆರ್.ಎನ್. ಜೀರಗಾಳ ಮತ್ತಿತರರಿದ್ದರು.
ಸದರಿ ಪ್ರಾತ್ಯಕೆ ಕುರಿತು ಹೆಚ್ಚಿನ ಮಾಹಿತಿಗೆ ಡಾ. ಸಿ.ಆರ್. ಹಿರೇಮಠ ಮೊ. 8310180013 ಮತ್ತು ಪ್ರೊ. ಪಿ.ಎಲ್. ಪುಠಾಣಿ ಮೊ. 9739062927ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.