ಬ್ಯಾಂಕ್ ಆಫ್ ಬರೋಡಾದಿಂದ ಚಪ್ಪಲ್ ಸ್ಟ್ಯಾಂಡ್ ಹಸ್ತಾಂತರಿಸಲಾಯಿತು 
ಜಿಲ್ಲೆ

ಬ್ಯಾಂಕ್ ಆಫ್ ಬರೋಡಾದಿಂದ ಕುರ್ಚಿ

ಪಡುಬಿದ್ರಿ: ಮಜೂರು ಕರಂದಾಡಿ ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಬ್ಯಾಂಕ್ ಆಫ್ ಬರೋಡ ವತಿಯಿಂದ ಚಪ್ಪಲ್ ಸ್ಟ್ಯಾಂಡ್, 10 ಕುರ್ಚಿಗಳನ್ನು ಹಸ್ತಾಂತರಿಸಲಾಯಿತು.

ಕಾಪು ಶಾಖಾ ಪ್ರಬಂಧಕ ಶಿವಪ್ರಸಾದ್, ನಯೇಶ್ ಶೆಟ್ಟಿ ಎಲ್ಲೂರು, ಯಶೋದರ ಶೆಟ್ಟಿ ಎರ್ಮಾಳು, ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ರವಿರಾಜ್ ಶೆಟ್ಟಿ ಪಂಜಿತ್ತೂರುಗುತ್ತು, ಎಸ್‌ಡಿಎಂಸಿ ಅಧ್ಯಕ್ಷ ಕರಂದಾಡಿ ಪದ್ಮನಾಭ ಶಾನುಭಾಗ್, ಮುಖ್ಯ ಶಿಕ್ಷಕ ಆರ್.ಎಸ್. ಕಲ್ಲೂರ, ನಿವೃತ್ತ ಮುಖ್ಯ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ, ಆಡಳಿತ ಸಮಿತಿ ಸದಸ್ಯ ನಾಗಭೂಷಣ್ ರಾವ್ ಇದ್ದರು.