ಹುಲಸೂರು ತಾಲೂಕಿನ ತೋಗಲೂರಿನಲ್ಲಿ ಶ್ರೀ ಸಿದ್ಧಾರೂಢ ಮಠದ ಅಧಿಕಾರ ಹಸ್ತಾಂತರ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮವನ್ನು ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಪ್ರಣವಾನಂದ ಸ್ವಾಮೀಜಿ, ಶ್ರೀ ಶಂಕರಾನAದ ಸ್ವಾಮೀಜಿ ಇತರರಿದ್ದರು. 
ಜಿಲ್ಲೆ

ಜೀವನದಲ್ಲಿ ಕೈಲಾದಷ್ಟು ಪುಣ್ಯದ ಕೆಲಸ ಮಾಡಿ

ರಾಜು ಯಮಕನಮರಡಿ

ಹುಲಸೂರು: ಮಾನವ ಜನ್ಮ ಶ್ರೇಷ್ಠವಾದದ್ದು, ಹೀಗಾಗಿ ಬದುಕಿದ್ದಷ್ಟು ದಿನ ಒಳ್ಳೆಯ ಕೆಲಸಗಳನ್ನು ಮಾಡಿ ಪುಣ್ಯ ಗಳಿಸಿಕೊಳ್ಳಬೇಕು ಎಂದು ಬೀದರ್‌ನ ಚಿದಂಬರಾಶ್ರಮದ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ನುಡಿದರು.

ತೋಗಲೂರಿನಲ್ಲಿ ಶ್ರೀ ಸಿದ್ಧಾರೂಢ ಮಠದ ಅಧಿಕಾರ ಹಸ್ತಾಂತರ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಋಣ ಯಾರು ಇಟ್ಟುಕೊಳ್ಳಬಾರದು, ಅದನ್ನು ತೀರಿಸಲು ಬೇರೆ ಜೀವಿಯಾಗಿ ಹುಟ್ಟಿ ಬರುತ್ತಾರೆ. ಭಗವಂತನ ಕೃಪೆಯೊಂದಿದ್ದರೆ ಶ್ರೇಷ್ಠ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ದಿ.ಚನ್ನಬಸಪ್ಪ ಧಬಾಲೆ ನಿರ್ಮಿಸಿದ್ದ ಶ್ರೀ ಸಿದ್ಧಾರೂಢ ಮಠವನ್ನು ಮುಚಳಂಬ ಮಠಕ್ಕೆ ಹಸ್ತಾಂತರಿಸುತ್ತಿರುವುದು ಸಂತಸವಾಗಿದೆ. ಮುಂದಿನ ದಿನಗಳಲ್ಲೂ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದ್ದು, ಪ್ರಣವಾನಂದ ಶ್ರೀಗಳು ಮಠದ ಅಭಿವೃದ್ಧಿ ಜತೆಗೆ ಭಕ್ತರನ್ನು ಉದ್ಧರಿಸುವ ಕೆಲಸ ಮಾಡಲಿದ್ದಾರೆ ಎಂದರು.

ಮುಚಳಂಬಾದ ನಾಗಭೂಷಣ ಶಿವಯೋಗಿ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಜಾತಿವಾದದಿಂದಾಗಿ ಇಡೀ ವಿಶ್ವವೇ ಆತಂಕದಲ್ಲಿ ದಿನ ದೂಡುತ್ತಿದೆ. ಧರ್ಮಗಳ ಮಧ್ಯ ಸಂಘರ್ಷ ಹೆಚ್ಚಾಗುತ್ತಿದೆ. ನಾವೆಲ್ಲರೂ ಒಂದು ಎಂಬ ಭಾವನೆಯನ್ನು ಎಲ್ಲರಲ್ಲೂ ಬರಬೇಕು, ಅಂದಾಗಲೇ ಸುಖಿ ಸಮಾಜ ನಿರ್ಮಾಣವಾಗಲಿ ಸಾಧ್ಯ ಎಂದು ತಿಳಿಸಿದರು.

ಚಳಕಾಪುರದ ಶ್ರೀ ಶಂಕರಾನಂದ ಸ್ವಾಮೀಜಿ, ವಚನ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಂಭುಲಿಂಗ ಕಾಮಣ್ಣ ಮಾತನಾಡಿದರು.
ಧಬಾಲೆ ಕುಟುಂಬದ ಸದಸ್ಯರು ಮಠದ ಪತ್ರಗಳನ್ನು ಶ್ರೀ ಡಾ.ಶಿವಕುಮಾರ ಸ್ವಾಮಿಗಳ ಮೂಲಕ ಶ್ರೀ ಪ್ರಣವಾನಂದ ಸ್ವಾಮಿಗಳಿಗೆ ಹಸ್ತಾಂತರಿಸಿದರು.

ಪ್ರಮುಖರಾದ ಲಕ್ಷ್ಮಣ ಹಂದಿಕೆರೆ, ಚಂದ್ರಕಲಾ ಧಬಾಲೆ, ಸಿದ್ದು ಕಾಮಣ್ಣ, ಸಂತೋಷ ಬಿರಾದಾರ, ಸಂತೋಷ ಧಬಾಲೆ, ರಾಜಶೇಖರ ಪಾಟೀಲ್, ಮೈಬೂಬ್ ಪಟೇಲ್, ಬಂಡಪ್ಪ ಮಂಠಾಳೆ, ಶಂಕ್ರೆಪ್ಪ ಪಾಟೀಲ್, ಬಲಭೀಮ ಚಾಕುರೆ, ಕಬೀರ ಲದ್ದೆ, ದಯಾನಂದ ಮುಳೆ ಇತರರಿದ್ದರು.

ತೊಗಲೂರ ಹಾಗೂ ಹಾಲಹಳ್ಳಿ ಗ್ರಾಮದಲ್ಲಿ ಸಿಂಗರಿಸಿದ ವಾಹನದಲ್ಲಿ ಶ್ರೀ ಸಿದ್ಧಾರೂಢ ಮೂರ್ತಿ ಹಾಗೂ ಸಾರೋಟದಲ್ಲಿ ಶ್ರೀ ಪ್ರಣವಾನಂದ ಸ್ವಾಮಿಗಳನ್ನು ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು. ಬಿಕ್ಷುಪತಿ ಸ್ವಾಗತಿಸಿ, ನಿರೂಪಣೆ ಮಾಡಿದರು.