ಬೆಂಗಳೂರು: ರಾಷ್ಟ್ರೀಯ ವಿನ್ಯಾಸ ಕೇಂದ್ರ (ಎನ್‌ಡಿಸಿ), ಮತ್ತು ಕೇಂದ್ರ ಜವಳಿ ಸಚಿವಾಲಯದ ಕೈಮಗ್ಗ ಅಭಿವೃದ್ಧಿ ಆಯುಕ್ತಾಲಯದ ಸಹಯೋಗದಲ್ಲಿ ಮಾ.14ರಿಂದ ‘ಬೆಂಗಳೂರು ಸೀರೆ ಉತ್ಸವ’ ಹಮ್ಮಿಕೊಳ್ಳಲಾಗಿದೆ.
ಜೆ.ಪಿ.ನಗರದ ಶುಭ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮಾ.14 ರಿಂದ 20ರವರೆಗೆ ಮೇಳವನ್ನು ಆಯೋಜಿಸಲಾಗಿದ್ದು, ಪ್ರತಿದಿನ ಬೆಳಗ್ಗೆ 11 ರಿಂದ ರಾತ್ರಿ 8 ಗಂಟೆಯವರೆಗೆ ಉತ್ಸವ ತರೆದಿರಲಿದೆ.
ಉತ್ಸವದಲ್ಲಿ ದೇಶದ ವಿವಿಧ ರಾಜ್ಯಗಳ ಸುಮಾರು 75 ಕ್ಕೂ ಹೆಚ್ಚು ಕೈಮಗ್ಗ ಕುಶಲಕರ್ಮಿಗಳು, ಸ್ವ-ಸಹಾಯ ಗುಂಪುಗಳು ಮತ್ತು ಸಹಕಾರಿ ಸಂಘಗಳ ಪಾಲ್ಗೊಂಡು ವೈವಿಧ್ಯಮಯ ಸೀರೆಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ.
ಒಂದು ವಾರ ನಡೆಯಲಿರುವ ಸೀರೆ ಉತ್ಸವವು ಕೈಮಗ್ಗದ ಕಲೆಗಾರರಿಗೆ, ಖರೀದಿದಾರರು, ರಫ್ತು ವ್ಯಾಪಾರಿಗಳು, ವಿನ್ಯಾಸಕರು ಮತ್ತು ಸಾರ್ವಜನಿಕರನ್ನು ಒಂದೇ ಸೂರಿನಡಿ ಬೆಸೆಯುವ ಪ್ರಯತ್ನವಾಗಲಿದೆ. ಕೇರಳ, ತಮಿಳುನಾಡು, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಜಾರ್ಖಂಡ್, ಗುಜರಾತ್, ಉತ್ತರಪ್ರದೇಶ, ರಾಜಸ್ಥಾನ, ಜಮ್ಮು-ಕಾಶ್ಮೀರ, ಮತ್ತು ಬಿಹಾರ ಸೇರಿದಂತೆ 50 ಕ್ಕೂ ಹೆಚ್ಚು ಕೈಮಗ್ಗದ ಸೀರೆಗಳ ವೈವಿಧ್ಯಮಯ ವಿನ್ಯಾಸಗಳು ದೊರೆಯಲಿವೆ.
ಉತ್ಸವಕ್ಕೆ ಪ್ರತಿದಿನ ಸಾವಿರಾರು ಜನ ಆಗಮಿಸುವ ನಿರೀಕ್ಷೆಯಿದ್ದು, ದೇಸಿ ವಸ ಬಳಕೆ ಮಾಡುವವರಿಗೆ ಸಂಸ್ಕೃತಿಯ ಅನುಭವವನ್ನು ಒದಗಿಸಲಿದೆ. ಹೆಚ್ಚಿನ ಮಾಹಿತಿಗೆ : www.nationaldesigncentre.org ಸಂಪರ್ಕಿಸಬಹುದು.