ನಾವೂರು ಗ್ರಾಮದ ಸಿಂತಾನಿಕಟ್ಟೆಯ ಅಪ್ಪಿ ಎಂಬುವರ ಮನೆಯನ್ನು ಹಸ್ತಾಂತರಿಸಲಾಯಿತು. ಉದ್ಯಮಿ ಸಂದೇಶ್ ಶೆಟ್ಟಿ, ಅಖಿಲ ಕರ್ನಾಟಕದ ಮಾಜಿ ಸೈನಿಕರ ಸಂಘ ಬಂಟ್ವಾಳ ಘಟಕದ ಅಧ್ಯಕ್ಷ ಮೋನಪ್ಪ ಪೂಜಾರಿ ಮೊಗರ್ನಾಡು ಮೊದಲಾದವರಿದ್ದರು.
- ಸಮಾಜದ ಬಂಧುಗಳ ಸಹಕಾರದಿಂದ ದುರಸ್ತಿ
- ಸಿಂತಾನಿಕಟ್ಟೆ ಅಪ್ಪಿ ಅವರಿಗೆ ಸುಸಜ್ಜಿತ ಸೂರು
ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಬಂಟ್ವಾಳ ಹಾಗೂ ಮಾತೃಭೂಮಿ ಸೇವಾ ಸಂ ನಾವೂರು ಜಂಟಿ ಆಶ್ರಯದಲ್ಲಿ ಸಮಾಜದ ಬಂಧುಗಳ ಸಹಕಾರದಿಂದ ದುರಸ್ತಿಗೊಂಡ ಬಂಟ್ಟಾಳ ತಾಲೂಕಿನ ನಾವೂರು ಗ್ರಾಮದ ಸಿಂತಾನಿಕಟ್ಟೆಯ ಅಪ್ಪಿ ಎಂಬುವರ ಮನೆಯನ್ನು ಹಸ್ತಾಂತರಿಸಲಾಯಿತು.
ಉದ್ಯಮಿ ಸಂದೇಶ್ ಶೆಟ್ಟಿ, ಅಖಿಲ ಕರ್ನಾಟಕದ ಮಾಜಿ ಸೈನಿಕರ ಸಂಘ ಬಂಟ್ವಾಳ ಘಟಕದ ಅಧ್ಯಕ್ಷ ಮೋನಪ್ಪ ಪೂಜಾರಿ ಮೊಗರ್ನಾಡು, ಮಾಜಿ ಸೈನಿಕರಾದ ರಾಮನಾಥ ಶೆಣೈ ಬಂಟ್ವಾಳ, ಐವನ್ ಮೆನೆಂಜಸ್ ಲೊರೆಟ್ಟೊಪದವು, ಹರೀಶ್ ಮೈಂದಾಳ, ನಾವೂರು ಗ್ರಾಮ ಪಂಚಾಯಿತಿ ಸದಸ್ಯರಾದ ಮಹಮ್ಮದ್ ಫಾರೂಕ್, ಮಾತೃಭೂಮಿ ಸೇವಾ ಸಂದ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಜತೆ ಕಾರ್ಯದರ್ಶಿ ವರುಣ್, ಸಂಘಟಕರಾದ ಹರೀಶ್ ಕೆಲ್ಲೆರ್ಮಾರ್, ಹರ್ಷಿತ್ ಪದವು, ಸ್ಥಳಿಯರಾದ ರಮೇಶ್ ಸಿಂತಾನಿಕಟ್ಟೆ, ಮನೆಯ ಕಾರ್ಯನಿರ್ವಹಿಸಿದ ಬಡಗಿ ಜಗದೀಶ್, ಸಂಘದ ನಿರ್ದೇಶಕ ಸುರೇಶ್ ಎಸ್.ನಾವೂರು ಮೊದಲಾದವರು ಉಪಸ್ಥಿತರಿದ್ದರು.