ಜಿಲ್ಲೆ

ಕೃಷಿ ಯಂತ್ರಗಳ ಹಸ್ತಾಂತರ

ಬಂಟ್ವಾಳ: 27.25 ಲಕ್ಷ ರೂ.ಅನುದಾನದಲ್ಲಿ ಹಾರ್ವೆಸ್ಟರ್ ಹಬ್ ಸ್ಥಾಪನೆಗೆ 2 ಕಂಬೈನ್ಸ್ ಭತ್ತ ಕಟಾವು ಯಂತ್ರ, 3 ಭತ್ತ ಹುಲ್ಲು ಕಂತೆ ಮಾಡುವ ಬೇಲರ್ ಯಂತ್ರಗಳನ್ನು ಬಂಟ್ವಾಳ ಕಸಬಾ ಗ್ರಾಮದ ಮೇತಿಕೆದು ನಿವಾಸಿ ಪಶುಪತಿ ಗೌಡ ಅವರಿಗೆ ಶಾಸಕ ರಾಜೇಶ್ ನಾಕ್ ವಿತರಿಸಿದರು.

ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆಯಡಿ ಶೇ.90ರ ಸಹಾಯಧನದಲ್ಲಿ 11 ಜನ ರೈತರಿಗೆ ತುಂತುರು ನೀರಾವರಿ ಘಟಕಗಳನ್ನು, ಕೇಂದ್ರದ ಕೃಷಿ ಯಂತ್ರೋಪಕರಣ ಉಪ ಅಭಿಯಾನದಡಿ 7 ಜನ ರೈತರಿಗೆ ಪವರ್ ವೀಡರ್ ಹಾಗೂ ಓರ್ವ ಫಲಾನುಭವಿಗೆ ಶೇ.50ರ ಸಹಾಯಧನದಲ್ಲಿ ಪವರ್‌ಸೈಯರ್ ವಿತರಣೆ ಮಾಡಲಾಯಿತು.

ಮಂಗಳೂರು ಉಪವಿಭಾಗದ ಉಪಕೃಷಿ ನಿರ್ದೇಶಕಿ ಕುಮುದಾ, ಬಂಟ್ವಾಳ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ.ಆರ್., ಕೃಷಿ ಅಧಿಕಾರಿ ನಂದನ್ ಶೆಣೈ ಪಿ.ಉಪಸ್ಥಿತರಿದ್ದರು.