ಪಟ್ಟಣದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಸ್ಮಾರ್ಟ್ ತರಗತಿ ಅನೂಕೂಲಕ್ಕೆ 5 ಲಕ್ಷ ರೂ. ವೆಚ್ಚದಲ್ಲಿ ಡಿಜಿಟಲ್ ಯಂತ್ರೋಪಕರಣಗಳನ್ನು ನೀಡಿದ ಜೆ.ಕೆ.ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಬಿ.ಎಸ್.ರವೀಂದ್ರ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಡಾ.ಅಚ್ಯುತ ರಾವ್, ಡಾ.ವರ್ಷ ಅವರಿಗೆ ಬಿಇಒ ಅನಂತರಾಜು ಅವರ ನೇತೃತ್ವದಲ್ಲಿ ಶಾಲಾ ಆಡಳಿತದಿಂದ ಸನ್ಮಾನಿಸಲಾಯಿತು. ಡಾ.ಪ್ರತಿಮಾ, ಕೂಡಲಕುಪ್ಪೆ ಸೋಮಶೇಖರ್, ಅಶೋಕ್ ಕುಮಾರ್ ಇತರರು ಇದ್ದರು. 
ಜಿಲ್ಲೆ

ಡಿಜಿಟಲ್ ಯಂತ್ರೋಪಕರಣ ಹಸ್ತಾಂತರ

ಮಾದೇಶ್ ತಿ.ನರಸೀಪುರ

ಶ್ರೀರಂಗಪಟ್ಟಣ: ಗ್ರಾಮೀಣ ಭಾಗದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಜ್ಞಾನದ ಜತೆಗೆ ಪ್ರತಿಭಾನ್ವಿತರಾಗಿದ್ದು, ಆಧುನಿಕ ಶಿಕ್ಷಣದ ಸ್ಪರ್ಶ ದೊರಕಿದ್ದಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸರಿ ಸಮಾನವಾಗಿ ಸಾಧನೆ ಮಾಡಲಿದ್ದಾರೆ ಎಂದು ಜೆ.ಕೆ.ಟೈಯರ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಬಿ.ಎಸ್.ರವೀಂದ್ರ ತಿಳಿಸಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರೌಢಶಾಲೆಯ ವಿದ್ಯಾರ್ಥಿಗಳ ಸ್ಮಾರ್ಟ್ ತರಗತಿ ಅನೂಕೂಲಕ್ಕೆ ಜೆ.ಕೆ.ಕಂಪನಿಯ ಸಿಎಸ್‌ಆರ್ ನಿಯಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ನೀಡಿದ ಡಿಜಿಟಲ್ ಯಂತ್ರೋಪಕರಣಗಳನ್ನು ಬುಧವಾರ ಹಸ್ತಾಂತರಿಸಿ ಮಾತನಾಡಿದರು.

ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದಕ್ಕೆ ಹೆಮ್ಮೆ ಪಡಬೇಕೇ ಹೊರತು ಎಂದಿಗೂ ಹಿಂಜರಿಕೆ ಪಡಬಾರದು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದ ಅದೆಷ್ಟೋ ಜನರು ಅದರಲ್ಲೂ ಗ್ರಾಮೀಣ ಭಾಗದವರು ಹಲವು ರೀತಿಯಲ್ಲಿ ದೇಶ-ವಿದೇಶದಲ್ಲಿ ಸಾಧನೆಗೈದು ಹೆಸರು ಗಳಿಸಿದ್ದಾರೆ. ಪ್ರಸ್ತುತ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ನಮ್ಮ ಮಕ್ಕಳು ಸಹ ಸ್ಪರ್ಧೆಯೊಡ್ಡುವಂತಹ ಶಿಕ್ಷಣ ಪೂರಕವಾಗಿ ಸಿಗಲಿ ಎಂಬ ಸಾಮಾಜಿಕ ಹೊಣೆಗಾರಿಕೆಯಿಂದ ಆಧುನಿಕ ಸೌಲಭ್ಯ ಮತ್ತು ವ್ಯವಸ್ಥೆಗಳನ್ನು ಸರ್ಕಾರಿ ಶಾಲೆಗೆ ಹಸ್ತಾಂತರಿಸಲಾಗಿದೆ. ಇವುಗಳ ಬಳಕೆಯಿಂದ ವಿದ್ಯಾರ್ಥಿಗಳು ದೇಶ ಮತ್ತು ಸಮಾಜಕ್ಕೆ ಸಂಪನ್ಮೂಲ ಕೊಡುಗೆಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಕ್ಷೇತ್ರ ಶಿಕ್ಷಣಾಕಾರಿ ಎಂ.ಆರ್.ಅನಂತರಾಜು ಸ್ಮಾರ್ಟ್ ತರಗತಿ ಶಿಕ್ಷಣಕ್ಕೆ ಚಾಲನೆ ನೀಡಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕಾರ್ಯಾಗಾರ ಹಾಗೂ ಪರೀಕ್ಷೆ ಪಾಸಾದ ಬಳಿಕ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದಾದ ಕೋರ್ಸ್‌ಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಇದೆ ವೇಳೆ ಮಾಹಿತಿ ನೀಡಿದರು.

ಸನ್ಮಾನ: ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ರವೀಂದ್ರ ಹಾಗೂ ಡಿಜಿಟಲ್ ತರಗತಿ ಮಹತ್ವದ ಕುರಿತು ಮಾಹಿತಿ ನೀಡಿದ ಕಂಪನಿ ಸಂಪನ್ಮೂಲ ವ್ಯಕ್ತಿಗಳಾದ ಡಾ.ಅಚ್ಯುತರಾವ್, ಡಾ.ವರ್ಷ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಕ್ಷೇತ್ರ ಶಿಕ್ಷಣ ಸಂಯೋಜಕಿ ಡಾ.ಪ್ರತಿಮಾ, ಶಾಲೆಯ ಎಸ್‌ಡಿಎಂಸಿ ಸದಸ್ಯ ಕೂಡಲಕುಪ್ಪೆ ಸೋಮಶೇಖರ್, ಉಪ ಪ್ರಾಂಶುಪಾಲ ಅಶೋಕ್ ಕುಮಾರ್, ಶಿಕ್ಷಕರಾದ ರಘು, ಸರಿತಾ, ಶಶಿಧರ್, ಚಂಪಾ, ಸ್ವಪ್ನಾ, ಪುಷ್ಪಾ ಹಾಗೂ ಮನೋಜ್ ಇತರರು ಇದ್ದರು.