ಜಿಲ್ಲೆ

ಸರ್ಕಾರಿ ಶಾಲೆಗೆ ದಾನಿಗಳಿಂದ ಕಟ್ಟಡ ಹಸ್ತಾಂತರ

ಮೈಸೂರು: ನಗದ ಲಕ್ಷ್ಮೀಪುರಂ ಬಡಾವಣೆಯ ದಕ್ಷಿಣ ವಲಯ ವ್ಯಾಪ್ತಿಯ(ಗಾಡಿ ಚೌಕ) ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಅಲ್ಲಿಯ ಹಳೆಯ ವಿದ್ಯಾರ್ಥಿಯಾಗಿರುವ ಅಮೆರಿಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯ ಡಾ.ಸಚ್ಚಿದಾನಂದಮೂರ್ತಿ ಅವರು ಸುಮಾರು ಒಂದೂವರೆ ಕೋಟಿ ರೂ.ವೆಚ್ಚದಲ್ಲಿ ಕಟ್ಟಿಸಿ ಕೊಟ್ಟಿರುವ ಶಾಲಾ ಕಟ್ಟಡ ಮತ್ತು ಸಭಾಂಗಣವನ್ನು ಇತ್ತೀಚೆಗೆ ಅಧಿಕೃತವಾಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಕೆ.ಪಾಂಡು ಅವರಿಗೆ ದಾನಿ ಸಹೋದರರಾದ ನಿವೃತ್ತ ಕೆಎಎಸ್ ಅಧಿಕಾರಿ ಓಂಪ್ರಕಾಶ್ ಹಸ್ತಾಂತರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಜು, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸೋಮೇಗೌಡ, ದಕ್ಷಿಣ ವಲಯದ ಶಿಕ್ಷಕರ ಸಂಘದ ಅಧ್ಯಕ್ಷ ಹರ್ಷ, ಶಾಲೆಯ ಮುಖ್ಯಶಿಕ್ಷಕ ರವಿಕುಮಾರ್, ಕಚೇರಿಯ ಮಂಜುನಾಥ್ ಇತರರಿದ್ದರು.