ಕುಂದಾಪುರದ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರೋಜೇರಿಯನ್ ಕಲೆ, ಕರಕುಶಲ ವಸ್ತುಗಳು ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನ ಜರುಗಿತು 
ಜಿಲ್ಲೆ

ಕರಕುಶಲ ವಸ್ತು, ವಿಜ್ಞಾನ ಮಾದರಿ ಪ್ರದರ್ಶನ

ಇಂದಿರಾ ಎನ್ ಕೆ

ಕುಂದಾಪುರ: ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರೋಜೇರಿಯನ್ ಕಲೆ, ಕರಕುಶಲ ವಸ್ತುಗಳು ಮತ್ತು ವಿಜ್ಞಾನ ಮಾದರಿ ಪ್ರದರ್ಶನ ಶನಿವಾರ ಜರುಗಿತು.

ಶಾಲಾ ಜಂಟಿ ಕಾರ್ಯದರ್ಶಿ ಹಾಗೂ ಹೋಲಿ ರೋಜರಿ ಚರ್ಚ್ ಧರ್ಮಗುರು ಪಾವ್ಲ್ ರೇಗೋ, ಹಳೇ ವಿದ್ಯಾರ್ಥಿ ಶ್ರೀನಿಧಿ ಮಧ್ಯಸ್ಥ ಶುಭಾಶಂಸನೆಗೈದರು. ಮುಖ್ಯ ಶಿಕ್ಷಕಿ ತೆರೇಜ್ ಶಾಂತಿ ಡಿಸೋಜ ಎ.ಸಿ., ಶಾಲಾಡಳಿತ ಮಂಡಳಿ ಸದಸ್ಯರಾದ ವಿನೋದ್ ಕ್ರಾಸ್ತಾ, ಅಮಿತಾ ಬರೆಟ್ಟೊ, ಶಾಲಾ ಶೈಕ್ಷಣಿಕ ಮಾರ್ಗದರ್ಶಕಿ ಮಾರ್ಗರೇಟ್ ಪಿಕಾರ್ಡೋ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಶಿಕ್ಷಕಿಯರಾದ ರಮ್ಯಾ, ರೆನಿಷಾ ಡಿಅಲ್ಮೇಡಾ, ರಮ್ಯಾ ಹೆಗ್ಡೆ, ಓರನ್ ಡಿಸೋಜ ಮಾರ್ಗದರ್ಶನ ನೀಡಿದರು. ರೋಹಿಣಿ ಸ್ವಾಗತಿಸಿದರು. ಸಂಚಿತಾ ಕಾರ್ಯಕ್ರಮ ನಿರೂಪಿಸಿದರು. ಪ್ರತೀಕ್ಷಾ ವಂದಿಸಿದರು.