pardಬೀಳಗಿ ಪಟ್ಟಣದಲ್ಲಿ ನಡೆದ ಸದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಗಂಗಾಧರ ಬಡಿಗೇರ, ಪ್ರಧಾನ ಕಾರ್ಯದರ್ಶಿ ದೇವೀಂದ್ರ ಬಡಿಗೇರ, ಪಾಂಡುರಂಗ ಬಡಿಗೇರ, ಅನಿಲ ಬಡಿಗೇರ ಕಾರ್ಯಕ್ರಮ ಭಿತ್ತಿ ಚಿತ್ರ ಪ್ರದರ್ಶಿಸಿದರು. 
ಜಿಲ್ಲೆ

24 ರಂದು ಕರಕುಶಲ ವಸ್ತುಪ್ರದರ್ಶನ

Vijayapura - Desk - Gurappa Lokuri

ಬೀಳಗಿ: ಸಮೀಪದ ಕೊರ್ತಿ ಸಮುದಾಯ ಭವನದಲ್ಲಿ ಶ್ರೀ ವಿಶ್ವಕರ್ಮ ಕುಶಲಕರ್ಮಿಗಳ ಸಂಘದ ಆಶ್ರಯದಲ್ಲಿ ಡಿ. 24 ರಂದು ಬೆಳಗ್ಗೆ 11 ಗಂಟೆಗೆ ಕರಕುಶಲ ವಸ್ತುಪ್ರದರ್ಶನ, ಶಿಕ್ಷಕಿ ಕಸ್ತೂರಿ ಪತ್ತಾರ ರಚಿಸಿದ ಅಥಿಕಾಮೃತ ಕವನ ಸಂಕಲನ ಬಿಡುಗಡೆ, ನೂತನ ಸಂಘ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ, ಸಾಧಕರಿಗೆ ಸಾಧಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಗಂಗಾಧರ ಬಡಿಗೇರ ತಿಳಿಸಿದರು.

ಸ್ಥಳೀಯ ಜಿಎಲ್‌ಬಿಸಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮುರನಾಳದ ಮಳೆರಾಜೇಂದ್ರ ಮಠದ ಜಗನ್ನಾಥ ಮಹಾಸ್ವಾಮಿಗಳು, ಕಲ್ಮಠದ ಗುರುಪಾದ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಜ್ಞಾನಾನಂದ ಶರಣರು, ಮಲ್ಲಯ್ಯ ಹಿರೇಮಠ ನೇತೃತ್ವ ವಹಿಸುವರು. ಶಾಸಕ ಜೆ.ಟಿ. ಪಾಟೀಲ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಎಸ್.ಆರ್. ಪಾಟೀಲ ಉದ್ಘಾಟಿಸುವರು. ಮಾಜಿ ಸಚಿವ ಡಾ. ಮುರುಗೇಶ ಆರ್. ನಿರಾಣಿ ವಸ್ತು ಪ್ರದರ್ಶನ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಎಚ್.ಆರ್. ನಿರಾಣಿ ನೂತನ ಸಂಘದ ನಾಮ ಲಕ ಅನಾವಣಗೊಳಿಸುವರು. ಜಾನಪದ ವಿದ್ವಾಂಸ ಡಾ. ಶ್ರೀರಾಮ ಇಟ್ಟಣ್ಣವರ ಕೃತಿ ಬಿಡುಗಡೆ ಮಾಡುವರು. ಹಂಪಿ ವಿಶ್ವವಿದ್ಯಾಲಯ ಕನ್ನಡ ಪ್ರಾಧ್ಯಾಪಕ ಡಾ. ವಿರೇಶ ಬಡಿಗೇರ ಪಾಸ್ತಾವಿಕವಾಗಿ ಮಾತನಾಡುವರು. ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆ ಅಧ್ಯಕ್ಷ ಎಂ.ಎನ್. ಪಾಟೀಲ, ಕಸಾಪ ತಾಲೂಕು ಅಧ್ಯಕ್ಷ ಗುರುರಾಜ ಲೂತಿ ಕೃಷಿ ಪರಿಚಯಿಸುವರು. ಅಲ್ಲದೆ, ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದೆಂದು ತಿಳಿಸಿದರು.

ಉಪಾಧ್ಯಕ್ಷ ಪಾಂಡುರಂಗ ಬಡಿಗೇರ, ವಿಶ್ವಕರ್ಮ ಸಮಾಜದ ತಾಲೂಕು ಕಾರ್ಯದರ್ಶಿ ಅನಿಲ ಬಡಿಗೇರ, ಕಾಶಿಪತಿ ಬಡಿಗೇರ, ರವಿಕಾಂತ ಪತ್ತಾರ, ಕಾಶಿನಾಥ ಬಡಿಗೇರ ಇದ್ದರು.