ಜಿಲ್ಲೆ

ಪದೇಪದೆ ನಡೆಯಲ್ಲ ಕೈ ಗ್ಯಾರಂಟಿ ಮೋಸದಾಟ

ಬಸವರಾಜ ವೀರಪ್ಪ ಗರಗ

ಬ್ಯಾಡಗಿ: ಕಾಂಗ್ರೆಸ್ ಗ್ಯಾರಂಟಿ ಮೋಸದಾಟ ಪದೇ ಪದೆ ನಡೆಯಲ್ಲ! ಎಷ್ಟು ಬಾರಿ ಮೋಸ ನಡೆಯಲಿದೆ..? ಇಂತಹ ಮೋಸ ಜನಕ್ಕೆ ತಿಳಿದಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಗೆ ಆಶೀರ್ವದಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಶಕ್ತಿಶಾಲಿಯಾಗಿದ್ದು, ವಿಪಕ್ಷ ನಾಯಕ, ಬಿಜೆಪಿ ಅಧ್ಯಕ್ಷ ಯಾರಾಗಬೇಕೆಂದು ರಾಷ್ಟ್ರೀಯ ನಾಯಕರು ನಿರ್ಧರಿಸಲಿದ್ದಾರೆ. ಯುವಸಮೂಹ ಬಿಜೆಪಿಯತ್ತ ವಾಲಿದೆ. ಯಾರೂ ಪಕ್ಷ ಬಿಟ್ಟು ಹೋಗಲ್ಲ. ಒಂದು ವೇಳೆ ಒಬ್ಬರು ಕಾಂಗ್ರೆಸ್​ಗೆ ಹೋದ್ರೆ ನಾಲ್ವರು ಬಿಜೆಪಿಗೆ ಬರಲಿದ್ದಾರೆ ಎಂದರು.
ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ರೈತಪರ ನಿಲುವು ತಾಳಬೇಕು, ರೈತರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಕೂಡಲೇ ರೈತರ ನಿಯೋಗ ತೆಗೆದುಕೊಂಡು ಕೇಂದ್ರಕ್ಕೆ ತೆರಳಿ ಇತ್ಯರ್ಥಪಡಿಸಿಕೊಳ್ಳಬೇಕು ಎಂದರು. ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಬಿಜೆಪಿ ಮಹಿಳಾ ತಾಲೂಕಾಧ್ಯಕ್ಷ ವಿದ್ಯಾಶೆಟ್ಟಿ, ಕೆ.ಇ. ಕಾಂತೇಶ ಇತರರಿದ್ದರು.