ಜಿಲ್ಲಾಮಟ್ಟದ ಪ್ರೌಢಶಾಲಾ ಬಾಲಕರ ವಿಭಾಗದ ಖೋ ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹನಗೋಡು ಪ್ರೌಢಶಾಲೆ ತಂಡವನ್ನು ಶಾಲಾ ಅಭಿವೃದ್ಧಿ ಸಮಿತಿಯವರು ಹಾಗೂ ಶಿಕ್ಷಕರು ಅಭಿನಂದಿಸಿದರು. ಸಂತೋಷ್ ಕುಮಾರ್, ಕೃಷ್ಣೇಗೌಡ, ಪ್ರಸನ್ನ, ವೀರಣ್ಣಕರಡಿ, ಇತರರು ಇದ್ದರು.  
ಜಿಲ್ಲೆ

ಹನಗೋಡು ಪ್ರೌಢಶಾಲೆ ತಂಡ ಪ್ರಥಮ

ಹನಗೋಡು: ಜಿಲ್ಲಾಮಟ್ಟದ ಪ್ರೌಢಶಾಲಾ ಬಾಲಕರ ವಿಭಾಗದ ಖೋ ಖೋ ಸ್ಪರ್ಧೆಯಲ್ಲಿ ಹನಗೋಡು ಪ್ರೌಢಶಾಲೆ ತಂಡ ಪ್ರಥಮ ಸ್ಥಾನ ಪಡೆದಿದೆ.

ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಪಿರಿಯಾಪಟ್ಟಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಖೋ ಖೋ ಸ್ಪರ್ಧೆಯ ಫೈನಲ್‌ನಲ್ಲಿ ಮೈಸೂರಿನ ಅಣ್ಣಯ್ಯಪ್ಪ ಪ್ರೌಢಶಾಲೆಯ ವಿರುದ್ಧ ಹನಗೋಡು ಶಾಲೆಯ ವಿದ್ಯಾರ್ಥಿಗಳು ಉತ್ತಮ ಆಟವಾಡಿ ಪ್ರಥಮ ಸ್ಥಾನ ಪಡೆದರು.

ಶಾಲೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳನ್ನು ಅಭಿನಂದಿಸಿ ಮಾತನಾಡಿದ ಮುಖ್ಯಶಿಕ್ಷಕ ಸಂತೋಷ್ ಕುಮಾರ್, ನಮ್ಮ ಶಾಲೆಯ ಕ್ರೀಡಾಪಟುಗಳು ಉತ್ತಮ ಆಟವಾಡಿ ಸಾಧನೆ ಮಾಡಿದ್ದಾರೆ. ಹನಗೋಡು ಪ್ರೌಢಶಾಲಾ ವಿದ್ಯಾರ್ಥಿಗಳು ಕಳೆದ 10 ವರ್ಷಗಳಿಂದ ಖೋ ಖೋ ಪಂದ್ಯದಲ್ಲಿ ಬಹುಮಾನ ಗೆಲ್ಲುವಲ್ಲಿ ವಿಫಲವಾಗಿದ್ದರು. ಆದರೆ ಈ ಬಾರಿ ಉತ್ತಮ ಆಟ ಪ್ರದರ್ಶನ ಮಾಡಿದ್ದಾರೆ.

ಪಂದ್ಯದಲ್ಲಿ ಬೆಸ್ಟ್ ಚೇಸರ್ ಆಗಿ ಹತ್ತನೇ ತರಗತಿ ವಿದ್ಯಾರ್ಥಿ ರಾಜೀವ್, ಬೆಸ್ಟ್ ಡಿಫೆಂಡರ್ ಆಗಿ ಸೃಜನ್ ಆಯ್ಕೆಗೊಂಡು ನಗದು ಬಹುಮಾನ ಪಡೆದಿದ್ದಾರೆ. ಮುಂದಿನ ತಿಂಗಳು ನ.5 ಮತ್ತು 7ರಂದು ಹುಣಸೂರು ನಗರದಲ್ಲಿ ವಿಭಾಗೀಯ ಖೋ ಖೋ ಪಂದ್ಯಾವಳಿ ಆಯೋಜಿಸಿದ್ದು ಮೈಸೂರು ವಿಭಾಗದ ಖೋ ಖೋ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕ್ರೀಡಾಪಟುಗಳನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣೇಗೌಡ, ದೈಹಿಕ ಶಿಕ್ಷಣ ಶಿಕ್ಷಕ ಪ್ರಸನ್ನ, ಶಿಕ್ಷಕರಾದ ವೀರಣ್ಣಕರಡಿ, ಭಾನುಮತಿ, ಛಾಯಾಮಣಿ, ಶರತ್, ಅರ್ಚನಾ ಬಾಯಿ, ರಘುಪತಿ, ವರ್ಷ, ಸೌಮ್ಯಾ, ಜಯಲಕ್ಷ್ಮೀ, ನಿಹಾರಿಕಾ ಅಭಿನಂದಿಸಿದರು.