ಹಾನಗಲ್ಲ: ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಒಂದೂವರೆ ಕೆಜಿಯಷ್ಟು ಗಾಂಜಾ ಹಾಗೂ ಮೂವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ತಾಲೂಕಿನ ಕಿರವಾಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಕಿರವಾಡಿ ಗ್ರಾಮದ ಮಾಲತೇಶ ರಾಮಪ್ಪ ಬಳಿಗಾರ (34), ಪರಶುರಾಮ ಬಸಪ್ಪ ಗಂಜೀಗಟ್ಟಿ (42) ಹಾಗೂ ಬ್ಯಾಡಗಿ ಗಾಂಧಿನಗರದ ಖಾದರಸಾವ್ ಬೇಪಾರಿ (41) ಬಂಧಿತರು.
ಆರೋಪಿ ಬ್ಯಾಡಗಿಯ ಖಾದರಸಾಬ್ ಬೇಪಾರಿ ಕಿರವಾಡಿಯ ಇಬ್ಬರು ಆರೋಪಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ. ಈ ಇಬ್ಬರು ಆರೋಪಿಗಳು ಕಿರವಾಡಿ ಗ್ರಾಮದ ಮರಿಯಮ್ಮದೇವಿ ದೇವಸ್ಥಾನದ ಬಳಿಯ ತಮ್ಮ ಮನೆಯಲ್ಲಿ 5 ಗ್ರಾಮ್ಳ ಪಾಕೆಟ್ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರೆನ್ನಲಾಗಿದೆ. ಈ ಕುರಿತು ಆಡೂರು ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.
ಎಸ್ಪಿ ಅಂಶುಕುಮಾರ, ಎಎಸ್ಪಿ ಎಲ್.ವೈ. ಶಿರಕೋಳ, ಶಿಗ್ಗಾಂವಿ ಡಿಎಸ್ಪಿ ಗುರುಶಾಂತಪ್ಪ ಅವರ ಮಾರ್ಗದರ್ಶನದಲ್ಲಿ ಹಾನಗಲ್ಲ ಸಿಪಿಐ ಎನ್.ಎಚ್. ಆಂಜನೇಯ, ಪಿಎಸ್ಐಗಳಾದ ಸಂಪತ್ ಆನೇಕಿವಿ, ಶರಣಪ್ಪ ಹಂಡರಗಾಲ್, ಸಿಬ್ಬಂದಿ ಈರಣ್ಣ ಲಂಗೋಟಿ, ಗುತ್ತೆಪ್ಪ ಬಾಸೂರ, ರವಿ ಹರಿಜನ, ಭೀಮಣ್ಣ ಗೋಡಿಹಾಳ, ಆನಂದ ಪಾಟೀಲ, ಶಂಭು ಸುಳ್ಳಳ್ಳಿ, ಫಕೀರೇಶ ಹೊಸಮನಿ ದಾಳಿಯಲ್ಲಿ ಪಾಲ್ಗೊಂಡಿದ್ದರು.