ಜಿಲ್ಲೆ

ತಾಯಂದಿರಿಗೆ ಉಡಿ ತುಂಬುವ ಕಾರ್ಯಕ್ರಮ

ಮಂಜುನಾಥ ಗದಗಿನ

ಹಾನಗಲ್ಲ: ಗೌರಿ-ಗಣೇಶ ಹಬ್ಬ ನಮ್ಮ ಧಾರ್ಮಿಕತೆಯ ಪ್ರತೀಕವಾಗಿದೆ. ಈ ಸಂದರ್ಭದಲ್ಲಿ ತಾಯಂದಿರನ್ನು ಗೌರವಿಸಬೇಕೆಂಬ ಸದುದ್ದೇಶದಿಂದ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ತಾಲೂಕಾಧ್ಯಕ್ಷ ರಾಮನಗೌಡ ಪಾಟೀಲ ಹೇಳಿದರು.

ಗೌರಿ ಗಣೇಶ ಹಬ್ಬದ ಅಂಗವಾಗಿ ತಾಲೂಕಿನ ಬ್ಯಾಗವಾದಿ ಗ್ರಾಮದಲ್ಲಿ ಜೆಡಿಎಸ್ ತಾಲೂಕು ಘಟಕದಿಂದ 600 ತಾಯಂದಿರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಕ್ಕಳ ಬಗ್ಗೆ ಕಾಳಜಿ ಕಡಿಮೆಯಾಗುತ್ತಿದೆ ಎಂಬ ದೂರುಗಳು ಸಮಾಜದಲ್ಲಿ ಕೇಳಿ ಬರುತ್ತಿವೆ. ಇದನ್ನು ತಡೆದು ಭವಿಷ್ಯಕ್ಕಾಗಿ ಮಕ್ಕಳನ್ನು ಸಾಂಸ್ಕೃತಿಕ, ಶೈಕ್ಷಣಿಕವಾಗಿ ಬೆಳೆಸಲು ಕಾಳಜಿವಹಿಸೋಣ ಎಂದು ಸಲಹೆ ನೀಡಿದರು.

ಸೋಮಸಾಗರ ಗ್ರಾಪಂ ಅಧ್ಯಕ್ಷೆ ಪ್ರೇಮಾ ಸಿದ್ದಪ್ಪ ಮಾಯಕ್ಕನವರ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸಿದ್ದಬಸಪ್ಪ ಯಾದವ, ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ರಾಜ್ಯ ಸಮಿತಿ ಸದಸ್ಯ ಶೇಖರಯ್ಯ ಹಿರೇಮಠ, ಮೂಕಪ್ಪ ಪಡೆಪ್ಪನವರ, ಅಲ್ತಾಫ್ ನದಾಫ್, ಗೌಸಮೋದ್ದೀನ ಆಲದಕಟ್ಟಿ, ಸಿದ್ದಪ್ಪ ಮಾಯಕ್ಕನವರ, ಗದಿಗೆಪ್ಪ ಸೋಮಸಾಗರ, ಆರ್.ಬಿ.ಪೂಜಾರ, ಸಲೀಂ ಸಮನವಳ್ಳಿ, ಬಸೆಟ್ಟೆಪ್ಪ ಗುದ್ಲಿಶೆಟ್ಟರ, ಕಮಲಮ್ಮ ಲಕಮಾಪುರ, ನೇತ್ರಾವತಿ ಕನವಳ್ಳಿ, ಲಲಿತಮ್ಮ ವಾಲ್ಮೀಕಿ, ನಿರ್ಮಲಾ ಆಲದಕಟ್ಟಿ, ದುರ್ಗಾದೇವಿ ಸಮಿತಿ ಅಧ್ಯಕ್ಷ ಈರಪ್ಪ ವಡ್ಡರ, ಪದಾಧಿಕಾರಿಗಳು ಇದ್ದರು.