ಗದಗ: ಇತ್ತೀಚಿಗೆ ಹಾನಗಲ್ ವಸತಿ ಗ್ರಹದಲ್ಲಿ ಅಲ್ಪಸಂಖ್ಯಾತರ ಮಹಿಳೆ ಮೇಲೆ ನಡೆದ ದೌರ್ಜನ್ಯ ಮತ್ತು ಅತ್ಯಾಚಾರವನ್ನು ಖಂಡಿಸಿ ನಗರದ ಮಹಾತ್ಮ ಗಾಂಧಿ ವೃತದಲ್ಲಿ ಬಿಜೆಪಿ ಅಲ್ಪಸಂಖ್ಯಾತರ ಘಟಕದಿಂದ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಚಾಂದಸಾಬ್ ಕೊಟ್ಟೂರು ಅವರು ಮಾತನಾಡಿ, ಅಲ್ಪಸಂಖ್ಯಾತರ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಇಂತಹ ಕೃತ್ಯಗಳು ಮುಂದುವರೆದರೆ ಬಿಜೆಪಿ ಘಟಕ ಸುಮ್ಮನಿರುವುದಿಲ್ಲ ಈ ಕುರಿತು ಮುಖ್ಯಮಂತ್ರಿ ಗೃಹ ಮಂತ್ರಿ ಹಾಗೂ ಸ್ಥಳೀಯ ನಾಯಕರು ಬೇರೆಬೇರೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಸರಕಾರದ ನಿಲುವನ್ನು ನೋಡಿದರೆ ಪ್ರಕರಣವನ್ನು ಮುಚ್ಚಹಾಕುವ ಯೋಜನೆ ರೂಪಿಸಿದಂತಾಗಿದೆ ಸಂತ್ರಸ್ತೆಗೆ ನ್ಯಾಯ ಸಿಗಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.
ಅಲ್ಪಸಂಖ್ಯಾತರ ಘಟಕದ ಇರ್ಶಾದ ಮಾನ್ವಿ ಅವರು ಮಾತನಾಡಿ, ಜನವರಿ 8ರಂದು ಹಾನಗಲ್ ವಸತಿಗೃಹದಲ್ಲಿ ಅಲ್ಪಸಂಖ್ಯಾತ ಮಹಿಳೆಯ ಮೇಲೆ ಏಳು ಜನರು ದೌರ್ಜನ್ಯ ನಡೆಸಿ ನೈತಿಕ ಪೊಲೀಸ್ ಗಿರಿ ಮೆರೆದಿದ್ದಾರೆ ಮತ್ತು ಎರಡು ದಿನಗಳವರೆಗೆ ಏಳು ಜನರಿಂದ ಅತ್ಯಾಚಾರ ನಡೆದಿದ್ದು ಮಹಿಳೆಯ ಪತಿ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸಹಕರಿಸುತ್ತಿಲ್ಲ ಇದರಿಂದ ಕಾಣದ ಕೈಗಳು ಕೆಲಸ ಮಾಡುತ್ತಿವೆ ಮಹಿಳೆಗೆ ನ್ಯಾಯ ಸಿಗಬೇಕು ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮುತ್ತು ಮುಶಿಗೇರಿ, ಶ್ರೀಪತಿ ಉಡುಪಿ, ಸುಧೀರ್ ಕಾಟಿಗರ,ಮಾಂತೇಶ್ ಬಾತಾಖಾನಿ, ರಮೇಶ್ ಸಜ್ಜನರ, ಅನಿಲ್ ಅಬ್ಬಿಗೇರಿ, ನಾಸಿರ್ ನರೇಗಲ್, ನಾಸಿರ್ ನಮಾಜಿ, ಫಾತಿಮಾ ನಮಾಜಿ, ಪರ್ವೀನ್ ಬಾನು ರೊಕ್ಕದಕಟ್ಟಿ, ಸಿಮ್ರಾನ್ ರೊಕ್ಕದಕಟ್ಟಿ, ಸೋಫಿಯಾ ನಮಾಜಿ, ಜೋಯಾ ಕಾಗದಗಾರ, ಹೀನಾ ಭಜಂತ್ರಿ, ರಿಹಾನ ಕೊಟ್ಟೂರ್, ಆಸಿಯಾ ನಮಾಜಿ,ಜಯಶ್ರೀ ಉಗಲಾಟದ, ವಿಜಯಲಕ್ಷ್ಮಿ ಮಾನ್ವಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು