ಜಿಲ್ಲೆ

ಕಲಕೇರಿ ಆದಿಶಕ್ತಿ ಮಹಿಳಾ ಜಾನಪದ ಸಂಘ ಉದ್ಘಾಟನೆ

ಹಾನಗಲ್ಲ: ತಾಲೂಕು ಕಲಕೇರಿ ಗ್ರಾಮದ ಗ್ರಾಮದೇವಿ ದೇವಸ್ಥಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಶ್ರೀ ಆದಿಶಕ್ತಿ ಮಹಿಳಾ ಜಾನಪದ ಸಂಘವನ್ನು ಉದ್ಘಾಟನೆ ನಿವೃತ್ತ ಶಿಕ್ಷಕ ಎಸ್.ಎಸ್.ಮೂರುಮಟ್ಟಿ ಉದ್ಘಾಟನೆ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಂಗೀತ, ಜಾನಪದ, ನಾಟಕ ಮತ್ತು ದೊಡ್ಡಾಟ ಕಾರ್ಯಕ್ರಮ ಜರುಗಿದವು. ಮಹಿಳೆಯರು ಸೋಬಾನೆ ಪದ ಪ್ರಸ್ತುತಪಡಿಸಿದರು.

ಸಮಾರಂಭದಲ್ಲಿ ಷಡಗರಹಳ್ಳಿಯ ಶಂಕರಯ್ಯ ಶಾಸ್ತ್ರೀ ಹಿರೇಮಠ, ಕಲ್ಕಿಯ ಮಹಾಲಿಂಗಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಕಲಾವಿದ ಶಿವಾನಂದಪ್ಪ ಬಣಕಾರ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಜಿಲ್ಲಾ ಕಲಾವಿರದ ಸಂಘದ ಅಧ್ಯಕ್ಷ ತಿಪ್ಪಯ್ಯಸ್ವಾಮಿ ಹೊಸಮನಿ, ಹಾನಗಲ್ಲ ತಾಲೂಕು ವೀರ ಕಲಾವಿದರ ಸಂಘದ ಅಧ್ಯಕ್ಷ ಬಸವರಾಜ ಕೋಳೂರ, ದೊಟ್ಟಾಡದ ಭಾಗವತ ಶಾಂತಪ್ಪ ಕೊಪ್ಪದ, ತಾಲೂಕು ಕಲಾವಿದರ ಸಂಘದ ಕಾರ್ಯದರ್ಶಿ ಕೃಷ್ಣಾಚಾರ್ಯ ಉಪಾಧ್ಯಾಯ, ಸಹಕಾರ್ಯದರ್ಶಿ ದೇವೇಂದ್ರಪ್ಪ ಮಂಟೂರ, ಆದಿಶಕ್ತಿ ಸಂಘದ ಅಧ್ಯಕ್ಷೆ ಪಾರವ್ವ ಕೊಪ್ಪದ, ಕಾರ್ಯದರ್ಶಿ ರತ್ನವ್ವ ಕೋಟಿ, ಸದಸ್ಯರು, ಗ್ರಾಪಂ ಸದಸ್ಯ ಪುಟ್ಟಪ್ಪ ಕೀರವಾಣಿ, ಬಸವಂತಪ್ಪ ಶೇಷಗಿರಿ, ಅಜ್ಜಪ್ಪ ಶಿರಹಳ್ಳಿ, ಈರಪ್ಪ ಮೆಳ್ಳಿಹಳ್ಳಿ, ಬಸನಗೌಡ ಬೋರೇಗೌಡ, ಸುಭಾಸ ಕಮ್ಮಾರ, ಕಲಕೇರಿಯ ಬಸವೇಶ್ವರ ಜಾನಪದ ದೊಡ್ಡಾಟ ಸಂಘದ ಅಧ್ಯಕ್ಷರು, ಸದಸ್ಯರು, ಕಲಕೇರಿಯ ಆದಿಶಕ್ತಿ ದೊಟ್ಟಾಟ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು, ಇತರರು ಪಾಲ್ಗೊಂಡಿದ್ದರು. ರಮೇಶ ಬಯಲಸೀಮಿ ನಿರೂಪಿಸಿದರು.