ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ಆವರಣ ಬುಧವಾರ ಸಿಬ್ಬಂದಿ ಸ್ವಚ್ಛತೆ ಮಾಡಿದರು. 
ಜಿಲ್ಲೆ

ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯ

ಮಂಜುನಾಥ

ಹೊಸಪೇಟೆ: ದಕ್ಷಿಣಕಾಶಿ ಹಂಪಿ ಶ್ರೀ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಫಲಪೂಜಾ ಮಹೋತ್ಸವದ ನಿಮಿತ್ತ ನಡೆದ ದೀಪೋತ್ಸವದಿಂದ ಎಣ್ಣೆ ಜಿಡ್ಡಾಗಿದ್ದ ಆವರಣದವನ್ನು ಬುಧವಾರ ಸಿಬ್ಬಂದಿ ಸ್ವಚ್ಛತೆ ಮಾಡಿದರು.

ದೇವಸ್ಥಾನದಲ್ಲಿ ಒಂದಲ್ಲಾ ಒಂದು ರೀತಿಯ ಭಕ್ತಿ ಕಾರ್ಯಕ್ರಮಗಳು ನಡೆದು ದೀಪಗಳನ್ನು ಹಚ್ಚುವುದರಿಂದ ದೇವಾಲಯದ ಆವರಣ ಎಣ್ಣೆ ಜಿಡ್ಡಿನಿಂದ ಕೂಡಿ ಪ್ರವಾಸಿಗರಿಗೆ ಮತ್ತು ಭಕ್ತರಿಗೆ ಓಡಾಡಲು ತೊಂದರೆಯಾಗುತ್ತಿತ್ತು. ದೇವಾಲಯ ಸ್ವಚ್ಛತೆ ಕಾಪಾಡಲು ಸಿಬ್ಬಂದಿ ನೀರು ಹಾಕಿ ತೊಳೆದು, ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದರು.

ಇದರಿಂದಾಗಿ ಮರದ ಹೊಟ್ಟು ದೇವಾಲಯದ ಆವರಣದಲ್ಲಿ ಹಾಕಿ ಕೆಲ ದಿನಗಳ ದಿನದ ನಂತರ  ತೆಗೆದರೆ ಸುಲಭವಾಗಿ ಎಣ್ಣೆ ಜಿಡ್ಡನ್ನು ತೆಗೆಯಬಹದು ಎಂದು ಸಬ್ಬಿನ ಪೂಡಿ ಹಾಕಿ ತೆಳೆಯುತ್ತಾರೆ. ಬುಧವಾರ ಸಿಬ್ಬಂದಿ ಸ್ವಚ್ಛತೆ ಮಾಡಿದರು.