ದೀಪಾವಳಿ ಹಬ್ಬದ ರಜೆ ಹಿನ್ನೆಲೆ ಹಂಪಿಗೆ ವಿಜಯ ವಿಠಲ ದೇಗುಲಕ್ಕೆ ಬೇಟಿ ನೀಡಿದ ಪ್ರವಾಸಿಗರು‌. 
ಜಿಲ್ಲೆ

ಪ್ರವಾಸಿಗರಲ್ಲಿ ಹಂಪಿ ಸಂಭ್ರಮ

ಮಂಜುನಾಥ

ಹೊಸಪೇಟೆ: ದೀಪಾವಳಿ ಹಬ್ಬದ ಮೂರು ದಿನ ರಜೆ ಹಾಗೂ ಭಾನುವಾರ ವೀಕೆಂಡ್‌ ಜತೆಗೆ ಕನ್ನಡ ರಾಜ್ಯೋತ್ಸವ ಇದ್ದುದ್ದರಿಂದ ಕಳೆದ ನಾಲ್ಕು ದಿನಗಳಿಂದ ಹಂಪಿಗೆ ಪ್ರವಾಸಿಗರು ಹರಿದು ಬಂದಿದ್ದಾರೆ.

ಅದರಲ್ಲೂ ಹಬ್ಬದ ನಿಮಿತ್ತ ಶುಕ್ರವಾರ ಹಾಗೂ ಶನಿವಾರ ಹೆಚ್ಚಿನ ಪ್ರವಾಸಿಗರು ಹರಿದು ಬಂದಿದ್ದಾರೆ. ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲ ವೀಕ್ಷಣೆಗೆ ಎರಡು ದಿನ 70 ಸಾವಿರಕ್ಕೂ ಅಧಿಕ ಜನ ಬಂದಿದ್ದು, ಭಾನುವಾರ 20 ಸಾವಿರ ಕ್ಕೂ ಅಧಿಕ ಜನ ಹರಿದು ಬಂದಿದ್ದಾರೆ. ಎದುರು ಬಸವಣ್ಣ ಮಂಟಪ, ಸಾಸಿವೆ ಕಾಳು ಗಣಪ ಮಂಟಪ, ಕಡಲೆ ಕಾಳು ಗಣೇಶ ಮಂಟಪ, ಶ್ರೀ ಕೃಷ್ಣ ದೇಗುಲ, ಹಜಾರ ರಾಮ ದೇಗುಲ, ಆನೆಲಾಯ, ಕಮಲ ಮಹಲ್‌, ಮಹಾನವಮಿ ದಿಬ್ಬ, ವಿಜಯ ವಿಠ್ಠಲ ದೇಗುಲ, ಕಲ್ಲಿನತೇರು, ಪುರಂದರ ಮಂಟಪ, ಕೊದಂಡರಾಮ ದೇಗುಲ ಸೇರಿದಂತೆ ನಾನಾ ಸ್ಮಾರಕಗಳಿಗೆ ಪ್ರವಾಸಿಗರು ಭೇಟಿ ನೀಡಿ ವೀಕ್ಷಿಸಿ ದೀಪಾವಳಿಯ ಸಂಭ್ರಮಿಸಿದ್ದಾರೆ. ಹಂಪಿಯ ಸ್ಮಾರಕಗಳ ಸೊಬಗನ್ನು ವೀಕ್ಷಿಸಿದ ಪ್ರವಾಸಿಗರು ಸ್ಮಾರಕಗಳ ಬಗ್ಗೆ ಹಾಗೂ ವಿಜಯನಗರ ಚರಿತ್ರೆಯನ್ನು ಮರ‍್ಗರ‍್ಶಕರಿಂದ ಮಾಹಿತಿ ಪಡೆದರು.